ಜೋರಾದ ಭಿನ್ನಮತ: ಪಕ್ಷ ಕಾಪಾಡಲು ಭಿನ್ನರ ಮನವಿ

Posted on April 14, 2011

0


ಬೆಂಗಳೂರು: ಬಿ.ಎಸ್. ಯಡಿ ಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮಧ್ಯಪ್ರವೇಶ ಮಾಡುವಂತೆ ಆರ್‌ಎಸ್‌ಎಸ್ ನಾಯಕರನ್ನು ಭಿನ್ನಮತೀಯರು ಕೋರಿದ್ದಾರೆ.

ಬೆಂಗಳೂರು ಹಾಗೂ ಹುಬ್ಬಳ್ಳಿ ಆರ್‌ಎಸ್‌ಎಸ್ ಕಾರ್ಯಾಲಯಗಳಿಗೆ ಭೇಟಿ ನೀಡಿದ ನಾಯಕರು ಸುದೀ ರ್ಘವಾಗಿ ಚರ್ಚೆ ನಡೆಸಿರುವುದಲ್ಲದೆ ಯಡಿಯೂರಪ್ಪ ಅವರನ್ನು ಆಧಿಕಾರ ದಿಂದ ಕೆಳಗಿಳಿಸದಿದ್ದರೆ ಪಕ್ಷಕ್ಕೆ ಹಿನ್ನಡೆ ಯಾಗಲಿದೆ ಎಂದು ವಿವರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಯಡಿ ಯೂರಪ್ಪ ತನ್ನ ಅಧಿಕಾರ ಅವಧಿಯಲ್ಲಿ ಮಾಡಿರುವ ಎಲ್ಲಾ ಭ್ರಷ್ಟಾಚಾರದ ಹಗರ ಣಗಳನ್ನು ವರಿಷ್ಠರ ಮುಂದೆ ಇಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.

ವರಿಷ್ಠರು ಕಠಿಣ ನಿರ್ಧಾರ ಕೈಗೊ ಳ್ಳಲು ಸಾಧ್ಯವಾಗಿಲ್ಲ. ಸರಕಾರವನ್ನು ಉಳಿಸಿಕೊಂಡು ಪಕ್ಷಕ್ಕಾಗಿರುವ ಹಾನಿ ಯನ್ನು ತಪ್ಪಿಸಲು ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುವುದು ಒಂದೇ ಮಾರ್ಗ. ನೀವು ಮಧ್ಯ ಪ್ರವೇ ಶಿಸಿರಿ ಎಂದು ಆರ್‌ಎಸ್ ಎಸ್ ಮುಖಂ ಡರಿಗೆ ಭಿನ್ನಮತೀಯರು ಮನವಿ ಮಾಡಿದ್ದಾರೆ. ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಆರ್‌ಎಸ್‌ಎಸ್ ನಾಯಕರನ್ನು ಭೇಟಿ ಮಾಡಿದರೆ, ಸಿ.ಟಿ. ರವಿ ಹಾಗೂ ಇತರ ನಾಯಕರು ಬೆಂಗ ಳೂರಿನಲ್ಲಿ ಆರ್‌ಎಸ್‌ಎಸ್ ಮುಖಂ ಡರನ್ನು ಭೇಟಿ ಮಾಡಿ ಈ ಸಂಬಂಧ ಸಮಾಲೋಚನೆ ನಡೆಸಿದ್ದಾರೆ.

Advertisements
Posted in: State News