ಗೊಂದಲ ಸೃಷ್ಟಿಸಿದ ನೋಟು: ಹತ್ತು ರೂ. ನೋಟಿನಲ್ಲಿ ‘ಫಾಲೋ ಜೀಸಸ್ ಗಾಡ್ ಬ್ಲೆಸ್ ಯು!’

Posted on April 14, 2011

0


ಮಂಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಮತಾಂತರ ವಿಷಯದಲ್ಲಿ ವಿವಾದ ಎದ್ದಿರು ವಂತಯೇ ಇದೀಗ ‘ಫಾಲೋ ಜೀಸಸ್ ಗಾಡ್ ಬ್ಲೆಸ್ ಯೂ’ ಎಂಬ ಬರಹವನ್ನು ಬರೆದ ನೋಟುಗಳು ನಗರದೆಲ್ಲೆಡೆ ಚಲಾವಣೆ ಯಾಗುತ್ತಿದ್ದು, ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿರುವಂತೆಯೇ, ಜಿಲ್ಲೆಯಲ್ಲಿ ಮತೀಯ ಸಾಮರಸ್ಯವನ್ನು ಕದಡುವ ಷಡ್ಯಂತ್ರವು ವ್ಯವಸ್ಥಿತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕಳೆದ ಮಾರ‍್ನಾಲ್ಕು ದಿನಗಳ ಹಿಂದೆ ನಗರದ ಬಲ್ಮಠದ ಪೆಟ್ರೋಲ್ ಪಂಪ್‌ಗೆ ಬಂದಿದ್ದ ಗ್ರಾಹಕನೊಬ್ಬ ಪೆಟ್ರೋಲ್ ಹಾಕಿಸಿ ಹಣವನ್ನು ಕೊಟ್ಟಿದ್ದ. ಇದರಲ್ಲಿದ್ದ ಹತ್ತು ರೂಪಾಯಿಯ ಒಂದು ನೋಟಿನ ಖಾಲಿ ಜಾಗದಲ್ಲಿ ಫಾಲೋ ಜೀಸಸ್, ಗಾಡ್ ಬ್ಲೆಸ್ ಯೂ (ಜೇಸಸನ್ನು ಅನುಸರಿಸಿ,ಅನುಗ್ರಹಿಸುತ್ತಾನೆ) ಎಂದು ಸೀಲ್ ಮುದ್ರಿಸಿ ಬರೆಯಲಾಗಿತ್ತು. ನಂತರ ಈ ನೋಟನ್ನು ನೊಡಲು ಹಲವಾರು ಮಂದಿ ಕೂತೂಹಲದಿಂದ ಜಮಾಯಿಸಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಇದೇ ರೀತಿಯಲ್ಲಿ ನಗರದೆಲ್ಲೆಡೆ ಇದೇ ರೀತಿ ಬರವಣಿಗೆಗಳಿದ್ದ ನೋಟುಗಳು ಚಲಾವಣೆ ಯಾಗುತ್ತಿರುವ ಬಗ್ಗೆ ಚರ್ಚೆಗಳು ಗುಮಾನಿಗಳು ಹರಡಿವೆ ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಮಂಗ ಳೂರಿನಲ್ಲಿ ಮತಾಂತರಕ್ಕೆ ಸಂಬಂಧಿಸಿಂದಂತೆ ಸಂಘಟನೆಗಳು ಹಾಗೂ ಕೆಲವು ಕ್ರೈಸ್ತ ಸಂಘಟ ನೆಗಳ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದವು. ಅಲ್ಲದೆ ಇತ್ತೀಚಿನ ಕೆಲ ದಿನಗಳ ಹಿಂದೆಯೂ ಕೂಡಾ ಇದೇ ಮತಾಂತರ ವಿಷಯದಲ್ಲಿ ಬಜರಂಗದಳ ಹಾಗೂ ಕ್ರೈಸ್ತ ಸಮುದಾಯದ ನಡುವೆ ಆರೋಪ, ಪ್ರತ್ಯಾರೋಪ ಪ್ರತಿಭಟನೆಗಳ ಕಾವು ಇರುವಂತೆಯೇ ಇದೀಗ ಹತ್ತು ರೂ. ನೋಟುಗಳಲ್ಲಿ ಮತಾಂತರ ಪ್ರಕ್ರಿಯೆಗೆ ಪುಷ್ಠಿ ಕರಣ ನೀಡುವಂತಹ ಬರವಣಿಗೆಗಳನ್ನು ವಿಕೃ ತರು ನೋಟಿನಲ್ಲಿ ಬರೆದು ಹಲವಾರು ಅವಾಂತ ರಗಳಿಗೆ ಕಾರಣರಾಗುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಈ ರೀತಿಯ ಕೃತ್ಯಗಳಿಗೆ ನೋಟು ಗಳನ್ನು ಬಳಸುತ್ತಿರುವುದು ಮಾತ್ರ ವಿಪ ರ್ಯಾಸ.

Advertisements