ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Posted on April 14, 2011

0


ಮಂಗಳೂರು: ಎದೆಗೆ ಗುಂಡು ಹಾರಿಸಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ಸಮೀಪದ ಐವರ್ನಾಡಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವ ಕನನ್ನು ಐವರ್ನಾಡಿನ ನಿಡುಬೆ ಪೂಜಾರಿ ಮನೆ ನಿವಾಸಿ ಕೊರಗಪ್ಪ ಗೌಡ ಎಂಬ ವರ ಪುತ್ರ ತೀರ್ಥರಾಮ (೨೮) ಎಂದು ಗುರುತಿಸಲಾಗಿದೆ.

ಬೆಳಗ್ಗೆ ಒಂಬತ್ತು ಗಂಟೆಯ ಸುಮಾ ರಿಗೆ ತೋಟದ ಮನೆಯಲ್ಲಿ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಚೀಟಿ ಬರೆದಿ ಟ್ಟಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ ಎಂದು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸುಳ್ಯ ಪೊಲೀಸರು ತಿಳಿಸಿದ್ದಾರೆ.

Advertisements
Posted in: Crime News