ಕಾಲಿಯಾ ರಫೀಕ್ ಸಹಚರ ಬಂಧನ

Posted on April 14, 2011

0


ಮಂಗಳೂರು: ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಲಿಯಾ ರಫೀಕ್ ಸಹಚರ ಕಾಸರಗೋಡಿನ ಉಪ್ಪಳ-ಪೈವಳಿಕೆ ನಿವಾಸಿ ಅಮ್ಮಿ ಯಾನೆ ಅಬ್ದುಲ್ ಹಮೀದ್ (೨೬) ಎಂಬಾತನನ್ನು ಕದ್ರಿ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.

ಕಾಲಿಯಾ ರಫೀಕ್ ಕುಖ್ಯಾತ ಕಳ್ಳನಾಗಿದ್ದು, ಆತ ನಡೆಸುತ್ತಿದ್ದ ಕಳವು ಕೃತ್ಯಗಳಲ್ಲಿ ಈತ ನೆರವಾಗುತ್ತಿದ್ದ ಮಾತ್ರವಲ್ಲದೆ ಆತ ತಲೆಮರೆಸಿಕೊಳ್ಳಲು ಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಸಕಲೇಶಪುರದಲ್ಲಿ ನಡೆದಿದ್ದ ಸ್ಕಾರ್ಪಿಯೋ ಕಾರು ಕಳ್ಳತನ ಪ್ರಕರ ಣಗಳಲ್ಲಿ ಹಮೀದ್ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಕಾಲಿಯಾ ಸೆರೆ ಸಿಕ್ಕಿದ್ದರೆ ಅಮ್ಮಿ ಪರಾರಿಯಾಗಿದ್ದ. ಕದ್ರಿ ಪೊಲೀಸರು ಖಚಿತ ಮಾಹಿತಿಯ ಮೇರೆ ಫಳ್ನೀರ್‌ನ ಆತನ ವಾಸ್ತವ್ಯದ ಮನೆಯಿಂದ ವಶಕ್ಕೆ ಪಡೆದುಕೊಂಡಿ ದ್ದಾಗಿ ತಿಳಿದುಬಂದಿದೆ. ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisements
Posted in: Crime News