ಐರ‍್ಲೆಂಡ್‌ಗೆ ದಕ್ಕಿದ ಏಕದಿನ ಪಂದ್ಯ

Posted on April 14, 2011

0


ಲಂಡನ್: ಮುಂದಿನ ವಿಶ್ವಕಪ್‌ನಿಂದ ಹೊರಗುಳಿ ಯಲಿರುವ ಐರ‍್ಲೆಂಡ್‌ಗೆ ೧೫ ಏಕದಿನ ಪಂದ್ಯಗಳಲ್ಲಿ ಆಡುವ ಭಾಗ್ಯ ಲಭಿಸಿದ್ದು ಈ ಮೂಲಕ ಐರಿಶ್ ಆಟಗಾರರಿಗೆ ಕ್ರಿಕೆಟ್‌ನಲ್ಲಿ ಇನ್ನಷ್ಟು ಸಾಧನೆಗೈಯ್ಯವ ಅವಕಾಶವನ್ನು ನೀಡಲಾಗಿದೆ.

ಇತ್ತೀಚಿಗಷ್ಟೇ ಐರ‍್ಲೆಂಡ್ ಕ್ರಿಕೆಟ್ ಅಧ್ಯಕ್ಷ ಡೇವಿಡ್ ವಿಲಿಯಮ್ಸ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿಯ ಅಧ್ಯಕ್ಷ (ಬಿಸಿಸಿಐ) ಶಶಾಂಕ್ ಮನೋಹರ್‌ರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದರು.

ನಂತರ ಪ್ರತಿಕ್ರಿಯಿಸಿದ ವಿಲಿಯಮ್ಸ್, ನಡೆಸಿದ ಮಾತುಕತೆ ಫಲಪ್ರದವಾಗಿದ್ದು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದು ಕ್ರಿಕೆಟ್ ಆಡುವ ಎಲ್ಲಾ ಸದಸ್ಯರು ತಮ್ಮ ವಿರುದ್ಧ ಸರಣಿ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಐರ‍್ಲೆಂಡ್ ಇನ್ನು ತನ್ನ ತಾಯ್ನಾಡಿನಲ್ಲಿ ಪಾಕಿಸ್ತಾನ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಆಡಲಿದೆ.

Advertisements
Posted in: Sports News