ಎರಡನೇ ಗೆಲುವು ಕಂಡ ಯುವಿ ಪಡೆ

Posted on April 14, 2011

0


ನವಿಮುಂಬಯಿ: ಮೋನಿಶ್ ಮಿಶ್ರಾ ಹಾಗೂ ರಾಬಿನ್ ಉತ್ತಪ್ಪ ಪ್ರದರ್ಶಿಸಿದ ಅದ್ಬುತ ಬ್ಯಾಟಿಂಗ್‌ನಿಂದ ಕೊಚ್ಚಿ ಟಸ್ಕರ‍್ಸ್ ವಿರುದ್ಧ ಪುಣೆ ವಾರಿಯರ‍್ಸ್ ನಾಲ್ಕು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸತತ ಎರಡನೇ ಗೆಲುವನ್ನು ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕೊಚ್ಚಿ ತಂಡ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಮೊತ್ತ ಪೇರಿಸಿತು. ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ ೧೪೮ ರನ್ ಕಲೆ ಹಾಕಿತು. ಜಡೇಜಾ (೪೭) ಹಾಗೂ ಹಾಡ್ಜ್ (೩೯) ಉತ್ತಮವಾಗಿ ಆಡಿದರು. ಚೇಸ್ ಮಾಡಿದ ಪುಣೆ ೧೮.೫ ಓವರ್ ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ೧೫೧ ರನ್ ದಾಖಲಿಸಿ ಗೆಲುವಿನ ನಗೆ ಬೀರಿತು. ಆರಂಭಿಕನಾಗಿ ಬಂದಿದ್ದ ಜೆಸ್ಸಿ ರೈಡರ್ (೧೭) ಉತ್ತಮ ಆಟವನ್ನು ದೊಡ್ಡ ಇನ್ನಿಂಗ್ಸ್‌ನತ್ತ ಬದಲಾಯಿಸಲು ವಿಫಲರಾದರು. ಸ್ಮಿತ್ (೨೪) ಕೂಡ ಕೆಲ ಹೊತ್ತು ಕ್ರೀಸ್‌ನಲ್ಲಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಯುವರಾಜ್ (೮) ಹಾಗೂ ಮನಾಸ್ (೧೨) ವಿಕೆಟ್ ಕಳೆದುಕೊಂಡಾಗ ತಂಡ ಕೆಲ ಹೊತ್ತು ಆತಂಕದ ಕ್ಷಣವನ್ನು ಎದುರಿಸಿತ್ತು. ಆದರೆ ಈ ವೇಳೆ ಆಗಮಿ ಸಿದ ರಾಬಿನ್ ಉತ್ತಪ್ಪ ಕೇವಲ ೧೩ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಮೂರು ಬೌಂಡರಿಗಳ ನೆರವಿನಿಂದ ೩೧ ರನ್ ಪೇರಿಸಿದಾಗ ತಂಡ ಭರ್ಜರಿ ಯಾಗಿ ಜಯಿಸುವ ನಿರೀಕ್ಷೆಯಲ್ಲಿತ್ತು. ಆದರೆ ಉತ್ತಪ್ಪ ಹಾಗೂ ಪಾರ್ನೆಲ್ ವಿಕೆಟ್ ಕಳೆದುಕೊಂಡಾಗ ಪಂದ್ಯ ಮತ್ತೆ ರೋಚಕತೆಯನ್ನು ಪಡೆದುಕೊಂಡಿತು. ಆದರೆ ಮೋನಿಶ್ ಮಿಶ್ರಾ (೩೭) ಹಾಗೂ ರಾಹುಲ್ ಶರ್ಮಾ (೧೦) ಜೋಡಿ ಕೇವಲ ೩.೧ ಓವರ್‌ಗಳಲ್ಲಿ ಅಜೇಯ ೩೩ ರನ್ ಕಲೆ ಹಾಕಿ ತಂಡಕ್ಕೆ ಜಯ ತಂದು ಕೊಡುವಲ್ಲಿ ಸಫಲರಾದರು. ಮೊನಿಶ್ ಇನ್ನಿಂಗ್ಸ್‌ನಲ್ಲಿ ತಲಾ ಎರಡು ಸಿಕ್ಸ್ ಹಾಗೂ ಬೌಂಡರಿ ಒಳಗೊಂ ಡಿತ್ತು. ಹಾಡ್ಜ್ ಎರಡು ವಿಕೆಟ್ ಕಬಳಿಸಿದರು.

ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಕೊಚ್ಚಿ ಆರಂಭದಲ್ಲೇ ಆಘಾತ ಆನು ಭವಿಸಿತು. ಆರಂಭಿಕರಾದ ಮೆಕ್‌ಕಲಮ್ ಹಾಗೂ ಲಕ್ಷ್ಮಣ್ ಶೂನ್ಯಕ್ಕೆ ಮರಳಿದರು. ನಾಯಕ ಜಯವರ್ಧನೆ (೨) ಕೂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು. ಪಾರ್ಥಿವ್ ಕೆಲ ಹೊತ್ತು ಕ್ರೀಸ್‌ನಲ್ಲಿ ದ್ದರೂ ಅವರ ಆಟ ೨೧ಕ್ಕೆ ಸೀಮಿತವಾ ಯಿತು. ಈ ವೇಳೆಗೆ ಕೊಚ್ಚಿ ಪ್ರಮುಖ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ೨೪ ರನ್ ಗಳಿಸಿತ್ತು. ಈ ಹಂತದಲ್ಲಿ ಜೊತೆಗೂ ಡಿದ ಜಡೇಜಾ ಹಾಗೂ ಹಡ್ಜ್ ಐದನೇ ವಿಕೆಟ್‌ಗೆ ೧೦.೩ ಓವರ್‌ಗಳಲ್ಲಿ ೮೮ ರನ್ ಕಲೆಹಾಕಿ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದರು. ಜಡೇಜಾ ತನ್ನ ಇನ್ನಿಂಗ್ಸ್‌ನಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸ್ ಸಿಡಿಸಿದ್ದರು. ಅಂತಿಮ ವಾಗಿ ಗೋಮೆಜ್ ವೇಗದ ೨೬ ರನ್ ಪೇರಿಸಿ ಸ್ಪರ್ಧಾತ್ಮಕ ಮೊತ್ತ ನಿಗದಿಪಡಿಸಿ ದರು.

Advertisements
Posted in: Sports News