ಅನಾಥ ಮಕ್ಕಳನ್ನು ಆರ್‌ಎಸ್‌ಎಸ್ ಕಚೇರಿಯಲ್ಲಿ ಬ ಿಡಿ: ಕ್ರೈಸ್ತರಿಗೆ ಎಂ.ಜಿ. ಸಲಹೆ

Posted on April 14, 2011

0


ಮಂಗಳೂರು: ಕ್ರೈಸ್ತರೇ ಹಿಂದೂ ಅನಾಥ ಮತ್ತು ಬಡ ಮಕ್ಕಳಿಗೆ ವಿದ್ಯೆ-ಅನ್ನಾಹಾರ ನೀಡುವಂತಹ ಸಮಾಜ ಸೇವೆಯನ್ನು ಕೈಬಿಟ್ಟು ನಿಮ್ಮಲ್ಲಿರುವ ಮಕ್ಕಳನ್ನು ಆರ್‌ಎಸ್‌ಎಸ್ ಕಚೇರಿ ಅಥವಾ ಎಂ.ಬಿ. ಪುರಾಣಿಕ್ ಅವರ ಮನೆಯಲ್ಲಿ ಬಿಟ್ಟು ಬನ್ನಿ. ಇದು ಕ್ರೈಸ್ತರಿಗೆ ಜೆಡಿಎಸ್ ನಾಯಕ ಎಂ.ಜಿ.ಹೆಗ್ಡೆ ಅವರ ಸಲಹೆ.

ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮೇಲಿನ ಸಲಹೆಯನ್ನು ನೀಡಿದ್ದಾರೆ. ಚರ್ಚ್ ದಾಳಿಯ ಬಳಿಕ ಮತ್ತು ಇತ್ತೀಚೆಗೆ ನಡೆದ ಅನಾಥಾಲ ಯಗಳ ಮೇಲಿನ ದಾಳಿಗೆ ಮತಾಂತರದ ಆರೋಪ ಹೊರಿಸಿರುವ ಬಜರಂಗದಳ ಅಂತಹ ಒಂದಾದರೂ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಕಮೀಷನರ್‌ಗೆ ದೂರು ನೀಡಿದ್ದರೆ ನಾವೂ ಕೂಡ ನಿಮ್ಮ ಜೊತೆ ಬಂದು ಕಾನೂನು ಹೋರಾಟ ಮಾಡುತ್ತೇವೆ. ಅದು ಬಿಟ್ಟು ಕ್ರೈಸ್ತರು ವಿದ್ಯೆಯ ಸೋಗಿನಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಗೂಬೆ ಕೂರಿಸುವ ಬದಲು ಅವರು ಮಾಡುವ ಕೆಲಸವನ್ನು ನೀವು ಮಾಡಿ ಎಂದು ಆಗ್ರಹಿಸಿದ್ದಾರೆ.

ಪುರಾಣಿಕ್ ಅವರ ಕಾಲೇಜಿನಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ. ಅಲ್ಲಿ ಗಣೇತ್ಸೋತ್ಸವವನ್ನು ಮಾಡ ಲಾಗುತ್ತದೆ.

ಅದೇ ರೀತಿ ಜಿಲ್ಲೆಯ ದೇವ ಸ್ಥಾನಗಳಿಗೆ ಸಾಕಷ್ಟು ಅನ್ಯಮತೀಯರು ಬರುತ್ತಾರೆ. ಇದನ್ನು ಮತಾಂತರ ಎಂದರೆ ಮೂರ್ಖತನವಾಗು ದಿಲ್ಲವೇ? ಎಂದು ಪ್ರಶ್ನಿಸಿದ ಹೆಗ್ಡೆ ಆರ್‌ಎಸ್‌ಎಸ್ ಚಿಂತನಾ ರಂಗದಲ್ಲಿ ಇಂತಹ ವಿಕೃತಿಯ ವಿಚಾರವನ್ನು ಬರೆದಿಲ್ಲ. ಅಂದ ಮೇಲೆ ನೀವು ಗುರೂಜಿಗಿಂತ ದೊಡ್ಡವರೇ ಎಂದು ಕಿಡಿಕಾರಿದ್ದಾರೆ.

Advertisements