ಅನಧಿಕೃತ ಧಾರ್ಮಿಕ ಕಟ್ಟಡ ತೆರವು

Posted on April 14, 2011

0


ಮಂಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶ ಅನು ಷ್ಠಾನಿಸಲು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಗೊಳಿಸುವ ಸಂಬಂಧ ನಡೆದ ಆರನೇ ಸಭೆಯಲ್ಲಿ ಗುರುತಿಸಲಾದ ೩೧೨ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾ ರಿಗಳು ಮಾಹಿತಿ ನೀಡಿದ್ದಾರೆ.

೨೪೫ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. ೬೫ ಸಕ್ರಮಗೊ ಳಿಸಲಾಗಿದೆ. ಕಟ್ಟಡ ತೆರವು ಕಾರ್ಯಾ ಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸಾಕಷ್ಟು ಮಾಹಿತಿ ಅಧಿಕಾರಿಗಳಿಗಿದ್ದು, ಇನ್ನು ಮುಂದೆ ಪ್ರತೀ ತಿಂಗಳು ಸಭೆ ನಡೆಸದೆ ಅಂತಿಮ ವರದಿ ನೀಡಲು ಸೂಚಿಸಿ ದರು. ಅತಿ ಸೂಕ್ಷ್ಮ, ನಿಭಾಯಿಸಲಾರದ ಸಮಸ್ಯೆಗಳನ್ನು ಮಾತ್ರ ತಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು.

Advertisements