ಅಧ್ಯಾದೇಶ ಹಿಂಪಡೆದು ಸುಳ್ಯಕ್ಕೆ ಬನ್ನಿ: ಮುಖ್ಯ ಮಂತ್ರಿಗೆ ಗೌಡ ಆಗ್ರಹ

Posted on April 14, 2011

0


ಮಂಗಳೂರು: ರೈತರಿಂದ ಕಾನ, ಬಾನೆ, ಕುಮ್ಕಿ ಮುಂತಾದ ಭೂಮಿ ಯನ್ನು ಒತ್ತುವರಿ ಮಾಡುವಂತೆ ನೀಡಿ ರುವ ಆದೇಶವನ್ನು ಹಿಂದಕ್ಕೆ ಪಡೆದು ಸುಳ್ಯಕ್ಕೆ ಬನ್ನಿ. ಆಗ ಇಲ್ಲಿನ ರೈತರೂ ಕೂಡ ನಿಮ್ಮನ್ನು ಸ್ವಾಗತಿಸುತ್ತಾರೆ. ಇಲ್ಲದಿದ್ದಲ್ಲಿ ಕಪ್ಪು ಬಾವುಟ ಪ್ರದರ್ಶಿಸ ಬೇಕಾಗುತ್ತದೆ. ಇದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿರುವ ಆಗ್ರಹ ಮತ್ತು ಎಚ್ಚರಿಕೆ.

ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ಸರಕಾರಿ ಮತ್ತು ಕುಮ್ಕಿ ಜಮೀನು ಇದ್ದು ಅದನ್ನು ರೈತರು ಉಪಯೋಗಿಸುತ್ತಾ ಬರುತ್ತಿದ್ದಾರೆ. ಮೆಡ್ರಾಸ್ ಸ್ಕ್ಯಾನಿಂಗ್ ಬೋರ್ಡ್ ಆದೇಶದಂತೆ ರೈತರ ಒಂದು ಎಕ್ರೆ ವರ್ಗ ಭೂಮಿಗೆ ಎರಡು ಎಕ್ರೆ ಕುಮ್ಕಿ ಭೂಮಿಯನ್ನು ಉಪಯೋಗಿಸ ತಕ್ಕದ್ದು ಎಂದಾಗಿದೆ. ಆದರೆ ೮.೯.೨೦೦೮ ರಲ್ಲಿ ರಾಜ್ಯ ಸರಕಾರ ಕುಮ್ಕಿ, ಕಾನ, ಬಾನೆ ಮತ್ತು ಸರಕಾರಿ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡುವ ಮೂಲಕ ಕರಾಳ ಕಾನೂನನ್ನು ಜಾರಿಗೆ ತಂದಿದೆ.

ಈ ರೀತಿಯಾಗಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಬೆಂಗಳೂರಿನಲ್ಲಿ ವಿದೇಶಿ ಬಂಡವಾಳಶಾಹಿಗಾರರಿಗೆ ನೀಡಿದಂತೆ ಇಲ್ಲಿಯೂ ಕರ್ನಾಟಕ ಸಾರ್ವಜನಿಕ ನಿಗಮದ ಮೂಲಕ ಕೈಗಾ ರಿಕೋದ್ಯಮಿಗಳಿಗೆ ನೀಡುವ ಹುನ್ನಾರ ನಡೆಸಲಾಗಿದೆ. ಇದಕ್ಕಾಗಿ ಈಗಾಗಲೇ ಸುಳ್ಯ ತಾಲೂಕೊಂದರ ಲ್ಲಿಯೇ ಒಂದು ಲಕ್ಷ ಎಕ್ರೆ ಭೂಮಿ ಒತ್ತುವರಿ ಆಗಬೇ ಕೆಂದು ಅಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಕೃಷಿಕರ ಸಮ್ಮೇಳ ನದ ಹೆಸರಲ್ಲಿ ಶನಿವಾರ ಸುಳ್ಯಕ್ಕೆ ಬರು ತ್ತಿದ್ದು ಅದಕ್ಕಾಗಿ ತಾಲೂಕಿನಲ್ಲಿ ಬಿ.ಜೆ.ಪಿ. ಕಟೌಟ್, ಬಂಟಿಂಗ್ಸ್‌ಗಳನ್ನು ಹಾಕಿ ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಲಾ ಗಿದೆ. ಇದರ ಜೊತೆಗೆ ಭೂಮಿ ಒತ್ತುವ ರಿಯ ಆದೇಶವನ್ನು ಹಿಂದಕ್ಕೆ ಪಡೆದು ಬಂದರೆ ಎಲ್ಲಾ ರೈತರು ಭಾಗವಹಿಸು ತ್ತಾರೆ. ಇಲ್ಲದಿದ್ದಲ್ಲಿ ಅದೇ ದಿನ ಮಧ್ಯಾಹ್ನ ಎಲ್ಲಾ ಪಕ್ಷದ ಮುಖಂಡರು ಸೇರಿ ರೈತರ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದ್ದು ಮುಖ್ಯಮಂತ್ರಿ ಇಲ್ಲಿಗೇ ಬರಬೇಕಾಗುತ್ತದೆ ಎಂದು ವೆಂಕಪ್ಪ ಗೌಡ ಎಚ್ಚರಿಸಿದ್ದಾರೆ.

Advertisements