ಅಜರುದ್ದೀನ್ ಮಗನೊಂದಿಗೆ ಜ್ವಾಲಾಗುಟ್ಟಾ ಜಾಲಿ

Posted on April 14, 2011

0


ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟ ಮಾಜಿ ಕ್ರಿಕೆಟಿಗ, ಸಂಸದ ಅಜರುದ್ದೀನ್ ಮಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ಜುಲೈ ತಿಂಗಳಲ್ಲಿ ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ನೊಂದಿಗೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾಗೆ ಸಂಬಂಧ ಇದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆಗ ತನಗೂ ಅಜರ್‌ಗೂ ಸಂಬಂಧವಿಲ್ಲ ಎಂದು ಹೇಳಿದ್ದ ಜ್ವಾಲಾಗುಟ್ಟ ತನ್ನ ಗಂಡನಿಗೆ ಡೈವೋರ್ಸ್ ನೀಡಿ ಅಚ್ಚರಿಗೂ ಕಾರಣಳಾಗಿದ್ದಳು. ಇದೀಗ ಮತ್ತೆ ಆಕೆ ಸುದ್ದಿಯಲ್ಲಿದ್ದಾಳೆ. ಐಪಿಎಲ್‌ನ ಕ್ರಿಕೆಟ್ ಪಂದ್ಯವೊಂದನ್ನು ಅಜರುದ್ದೀನ್ ಮಗನೊಂದಿಗೆ ವೀಕ್ಷಿಸುತ್ತಿದ್ದಾಗ ಮಾಧ್ಯಮ ದವರ ಕಣ್ಣಿಗೆ ಬೀಳುವ ಮೂಲಕ ಹೊಸ ಗಾಸಿಪ್‌ಗೆ ಕಾರಣಳಾಗಿದ್ದಾಳೆ.

ಕಾಮನ್‌ವೆಲ್ತ್‌ನಲ್ಲಿ ಗೋಲ್ಡ್ ಮೆಡಲ್ ಗೆದ್ದ ಜ್ವಾಲಾಗುಟ್ಟಾಳ ಆಸು ಪಾಸು ಸದಾ ಅಜರುದ್ದೀನ್ ತಿರುಗಾ ಡುವುದನ್ನು ನೋಡಿ ಜ್ವಾಲಾ, ಅಜರ್‌ನ ಮೋಡಿಗೆ ಬಿದ್ದಿದ್ದಾಳೆ ಎನ್ನುವ ಸುದ್ದಿಯಿತ್ತು.

ಅಜರುದ್ದೀನ್ ಆಕೆಗೆ ಬೆಲೆಬಾಳುವ ಬಿಎಂಡಬ್ಲು ಕಾರನ್ನು ಉಡುಗೊರೆ ಕೊಟ್ಟಿದ್ದೂ ಸುದ್ದಿಯಾಗಿತ್ತು. ಆದರೆ ಜ್ವಾಲಾ ಅಜರ್ ಜೊತೆಗಿನ ಯಾವುದೇ ಸಂಬಂಧವನ್ನು ನಿರಾಕರಿಸಿದ್ದಳು. ತಾನು ಅಜರ್ ಮತ್ತು ಸಂಗೀತಾ ಬಿಜಲಾನಿ ನಡುವೆ ಬಿರುಕು ಮೂಡಿಸಲಾರೆ ಎಂದಿದ್ದಳು. ಈ ಪ್ರಕರಣ ಹಳೆಯದಾಗುವ ಹೊತ್ತಿಗೇ ಆಕೆ ಅಜರ್‌ನನ್ನು ಮಾವನ ರೂಪದಲ್ಲಿ ನೋಡುತ್ತಿದ್ದಾಳೆಯೇ ಎನ್ನುವ ಅನುಮಾನ ಎದ್ದಿದೆ.

ಅಂದರೆ ಜ್ವಾಲಾ ಗುಟ್ಟಾ ಅಜರ್ ಮಗನೊಂದಿಗೆ ಪ್ರೀತಿಗೆ ಬಿದ್ದಿದ್ದಾಳೆ ಎನ್ನುತ್ತಿದೆ ಹೊಸ ಸುದ್ದಿ.

ಅಜರುದ್ದೀನ್ ಪುತ್ರ ಅಸಾದುದ್ದೀನ್‌ನೊಂದಿಗೆ ಜ್ವಾಲಾ ಸದಾ ಕಾಣಿಸಿ ಕೊಳ್ಳುತ್ತಿದ್ದಾಳೆ. ಹೈದರಾಬಾದ್‌ನಲ್ಲಿ ಈ ಜೋಡಿ ಶಾಪಿಂಗ್‌ನಲ್ಲಿ, ಉದ್ಘಾಟನೆ ಸಮಾರಂಭದಲ್ಲಿ…ಹೀಗೆ ಎಲ್ಲೆಂದರಲ್ಲಿ ಜತೆಯಾಗೇ ಕಾಣಿಸಿಕೊಳ್ಳುತ್ತಿದೆ.

ಜ್ವಾಲಾ ಬ್ಯಾಡ್ಮಿಂಟನ್ ಆಡುವ ಎಲ್ಲಾ ಪಂದ್ಯಗಳಿಗೂ ಅಸಾದುದ್ದೀನ್ ಬರುತ್ತಾನೆ. ಕಾರ‍್ಯಕ್ರಮದಲ್ಲಿ ಜೊತೆಯಾಗೇ ಬಂದು ಹೋಗುತ್ತಾರೆ ಎನ್ನುತ್ತಿವೆ ಮೂಲಗಳು.

ಆದರೆ ಜ್ವಾಲಾ ಮಾತ್ರ ಅಸಾದುದ್ದೀನ್‌ನನ್ನು ತುಂಬಾ ವರ್ಷಗಳಿಂದ ಬಲ್ಲೆ. ಆತನೊಂದಿಗೆ ನನ್ನದು ಗೆಳೆತನ ಮಾತ್ರ ಎನ್ನುತ್ತಿದ್ದಾಳೆ. ಭವಿಷ್ಯದ ಕ್ರಿಕೆಟಿಗನಾಗಿ ರೂಪುಗೊಳ್ಳುತ್ತಿರುವ ಅಸಾದುದ್ದೀನ್ ಈಗಲೇ ವಿವಾದದಲ್ಲಿ ಬಿದ್ದು ತನ್ನ ವೃತ್ತಿ ಜೀವನವನ್ನು ಹಾಳು ಮಾಡಿಕೊಳ್ಳುವುದು ಆಕೆಗೂ ಬೇಡವಾಗಿದೆ.

Advertisements