ಅಕ್ರಮ ಪ್ರವೇಶ, ಸಾರ್ವಜನಿಕ ಸೊತ್ತು ಹಾನಿ, ಜೀವ ಬ ೆದರಿಕೆ: ಜಮಾಅತ್ ಪ್ರಧಾನ ಕಾರ್ಯದರ್ಶಿಯ ಬಂಧನ

Posted on April 14, 2011

0


ಕಾರ್ಕಳ: ಅಕ್ರಮವಾಗಿ ಪ್ರವೇಶಿಸಿ, ಸಾರ್ವಜನಿಕ ಸೊತ್ತುಗಳನ್ನು ಹಾನಿ ಗೊಳಿಸಿ, ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಯಾಗಿರುವ ಸ್ಥಳೀಯಾಡಳಿತ ಕೌನ್ಸಿಲ್ ರೊಬ್ಬರನ್ನು ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರು ಬಂಧಿ ಸಿದ್ದಾರೆ.

ಕಾರ್ಕಳ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯರಾದ ಬಂಗ್ಲೆಗುಡ್ಡೆಯ ಮಹಮ್ಮದ್ ಶರೀಫ್(೩೭) ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಸಾಲ್ಮರ್‌ನಲ್ಲಿ ವ್ಯಾಪಾರ ನಡೆಸುತ್ತಿರುವ ಹಝ್ರತ್‌ಖಾನ್ ಎಂಬವರ ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿದ್ದ ಸೊತ್ತು ಗಳನ್ನು ನಾಶಮಾಡಿ ಜೀವ ಬೆದರಿಕೆ ಯೊಡ್ಡಿರುವ ಆರೋಪದ ಮೇರೆಗೆ ಪೊಲೀಸರು ಮಹಮ್ಮದ್ ಶರೀಫ್ ರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಘಟನೆಗೆ ಕಾರಣ

ಕಾರ್ಕಳ ನಗರದ ಸಾಲ್ಮರ್‌ನಿಂದ ಅನಂತಶಯನದವರೆಗಿನ ರಸ್ತೆ ಅಗಲೀ ಕರಣ ಪ್ರಕ್ರಿಯೆ ಈಗಾಗಲೇ ನಡೆಯು ತ್ತಿದ್ದು, ಈ ಯೋಜನೆಗೆ ಆರಂಭದಿಂ ದಲೂ ಬಹಿರಂಗವಾಗಿ ಬೆಂಬಲ ಸೂಚಿಸಿದ ಏಕೈಕ ಕೌನ್ಸಿಲರ್ ಬಂಗ್ಲೆಗು ಡ್ಡೆಯ ಮಹಮ್ಮದ್ ಶರೀಫ್ ಅಗಿದ್ದಾರೆ. ಜಿಲ್ಲಾಡಳಿತ ಕ್ರಮದ ವಿರುದ್ಧ ಸ್ಥಳೀಯ ರಿಂದ ಭಾರೀ ವಿರೋಧ ವ್ಯಕ್ತಗೊಂ ಡಾಗ ಸಾಲ್ಮರ್ ಜಾಮೀಯಾ ಮಸೀ ದಿಗೆ ಸೇರಿರುವ ಜಾಗವನ್ನು ಪುರಸಭಾ ಅಭಿವೃದ್ಧಿಗೆ ಬಿಟ್ಟುಕೊಡಲು ಜಮಾತ್ ಸಂಪೂರ್ಣ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದೆ ಎಂದು ಅವರು ಪುರಸಭಾ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು. ಇದರ ಅಂಗವಾಗಿ ಸಾಲ್ಮರ ಜಾಮೀಯಾ ಮಸೀದಿ ಮುಂಭಾಗದ ರಸ್ತೆ ಅಗಲೀಕರಣ ಪ್ರಕ್ರಿಯೆ ಕಳೆದ ಎರಡು ದಿನಗಳಿಂದ ಭರದಿಂದ ಸಾಗುತ್ತಿದೆ. ಮಸೀದಿಗೆ ಸೇರಿದ ಕಂಪೌಂಡ್‌ನ್ನು ಕೆಡವಿ ಹಾಕಲಾಗಿತ್ತು. ಮರು ಕಂಪೌಂಡ್ ನಿರ್ಮಾಣಕ್ಕಾಗಿ ಅಲ್ಲಿದ್ದ ಕೆಲ ಕೆಂಪುಕಲ್ಲುಗಳನ್ನು ಜಮಾಅತ್‌ನ ಪ್ರ. ಕಾರ್ಯದರ್ಶಿ ಮಹಮ್ಮದ್ ಶರೀಫ್ ಅಲ್ಲಿಯೇ ಸಂಗ್ರಹಿಸಿಟ್ಟಿದ್ದರೆಂದು ತಿಳಿದುಬಂದಿದೆ.

ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮಳೆ ನೀರು ಹರಿದುಹೋಗಲು ಚರಂಡಿ ನಿರ್ಮಿಸಲು ಹೊಂಡ ತೋಡಲಾಗಿತ್ತು. ಇದರಿಂದ ಅಲ್ಲಿನ ವ್ಯಾಪಾರಿಗಳಿಗೆ ತೊಡಕು ಉಂಟಾಗಿತ್ತು. ಚರಂಡಿಗಾಗಿ ಹೊಂಡ ತೋಡುವಾಗ ಜಿಲ್ಲಾಡಳಿತ ಸ್ಥಳೀಯ ವ್ಯಾಪಾರಿಗಳ ಹಿತ ದೃಷ್ಠಿಯಲ್ಲಿಟ್ಟು ಹಾಸುಗಲ್ಲು ಹಾಕದೇ ಇದ್ದುದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವೆನ್ನಲಾಗಿದೆ. ಇದರಿಂದಾಗಿ ಅಲ್ಲಿನ ವ್ಯಾಪಾರಿಗಳು ಜಮಾಅತ್ ಕಮಿಟಿಯವರ ಗಮನಕ್ಕೆ ತಾರದೆಯೇ ಮರುಕಂಪೌಂಡ್ ನಿರ್ಮಿಸಲೆಂದು ಸಂಗ್ರಹಿಸಿಟ್ಟಿದ್ದ ಕೆಂಪು ಕಲ್ಲುಗಳನ್ನು ತೋಡಿನ ಹೊಂಡಕ್ಕೆ ತುಂಬಿಸಿ ವ್ಯಾಪಾರ ಕೇಂದ್ರಕ್ಕೆ ಹಾದು ಬರಲು ದಾರಿ ಮಾಡಿದ್ದರು.

ಇದೇ ವಿಚಾರವನ್ನು ಮುಂದಿಟ್ಟು ಜಮಾಅತಿನ ಪ್ರ.ಕಾರ್ಯದರ್ಶಿ ಮಹಮ್ಮದ್ ಶರೀಫ್, ಸ್ಥಳೀಯ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಜಮಾಅತ್ ಕಮಿಟಿಯ ಅನುಮತಿ ಪಡೆಯದೇ ಕಲ್ಲುಗಳನ್ನು ಹಾನಿಮಾಡಿದ್ದೀರಿ. ಇದಕ್ಕೆ ನೀವೇ ಹೊಣೆಗಾರರು. ಬಾಡಿಗೆ ಸರಿಯಾಗಿ ನೀಡದೇ, ಇದೀಗ ಜಮಾಅತ್‌ಗೆ ಮತ್ತೊಂದು ನಷ್ಟವನ್ನುಂಟು ಮಾಡುತ್ತಿದ್ದೀರಿ ಎನ್ನುತ್ತಿದ್ದಂತೆ ವ್ಯಾಪಾರಿ ಹಝ್ರತ್‌ಖಾನ್ ಆ ಕಲ್ಲು ಯಾರ ಅಪ್ಪನದಲ್ಲ ಎಂದು ಉಡಾಫೆಯಾಗಿ ಮಾತನಾಡಿರುವುದೇ ಘಟನೆ ವಿಕೋಪಕ್ಕೆ ಹೋಗಲು ಕಾರಣವಾ ಯಿತ್ತೆನ್ನಲಾಗಿದೆ. ಕೋಪ ನೆತ್ತಿಗೇರಿಸಿಕೊಂಡ ಮಹಮ್ಮದ್ ಶರೀಫ್ ಹಿಂದೆ ಮುಂದೆ ಯೋಚಿಸದೇ ಏಕಾಏಕಿ ಹಝ್ರತ್‌ಖಾನ್‌ನ ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ತಿಂಡಿ ತಿನಸುಗಳು ಇದ್ದ ಭರಣಿಗಳನ್ನು ಹೊರಗೆಸೆದು ಜೀವಬೆದರಿಕೆಯೊಡ್ಡಿದ್ದರು. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳದಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಗಾಯಾಳುವಾಗಿರುವ ಹಾಗೂ ಜೀವಬೆದರಿಕೆಗೆ ಒಳಗಾಗಿರುವ ಹಝ್ರತ್‌ಖಾನ್‌ಗೆ ಜಮಾತ್ ಕಮಿಟಿಯು ಮಸೀದಿಯ ಅಧೀನದಲ್ಲಿರುವ ಕಟ್ಟಡದ ಕೋಣೆಯನ್ನು ಇದುವರೆಗೂ ಬಾಡಿಗೆಗೆ ನೀಡಿಲ್ಲವೆಂಬ ಅಂಶಬೆಳಕಿಗೆ ಬಂದಿದೆ. ನಗರದಲ್ಲಿ ಆಸ್ಪತ್ರೆಯೊಂದನ್ನು ಹೊಂದಿರುವ ವೈದ್ಯ ಡಾ. ರಿಜ್ವಾನ್ ಎಂಬವರ ಮಾಲಕತ್ವದಲ್ಲಿ ಆ ಅಂಗಡಿ ಇರುವುದು ಬೆಳಕಿಗೆ ಬಂದಿದೆ. ಜಮಾತ್‌ನ ಗಮನಕ್ಕೆ ಬಾರದೆಯೇ ಒಳಬಾಡಿಗೆಯಾಗಿ ಹಝ್ರತ್‌ಖಾನ್ ಅವರಿಗೆ ನೀಡಿಲಾಗಿಯೇ? ಹಾಗೊಂದು ವೇಳೆ ಹಾಗೇ ಅದ್ದಲ್ಲಿ ಅದು ಕಾನೂನಿಗೆ ವಿರುದ್ಧವಾಗುತ್ತದೆ. ಈ ಬಗ್ಗೆ ಕೂಡಾ ಚರ್ಚೆ ನಡೆಯಬೇಕು ಎಂಬುದು ಮಹಮ್ಮದ್ ಶರೀಫ್ ವಾದವಾಗಿದೆ.

Advertisements
Posted in: Crime News