ಸಾಲ ಭಾದೆ: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

Posted on April 12, 2011

0


ಮಂಗಳೂರು: ಬ್ಯಾಂಕ್ ಸಾಲ ತೀರಸಲಾಗದ ಭಯದಿಂದ ಮಹಿಳೆ ಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅತ್ಯಡ್ಕ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಸ್ಥಳೀಯ ನಿವಾಸಿ ಸೀತಾರಾಯ ಎಂಬವರ ಪತ್ನಿ ರತ್ನಾವತಿ (೬೦)ಎಂದು ಗುರುತಿಸಲಾಗಿದೆ. ಇವರು ರವಿವಾರ ಬೆಳಗ್ಗೆ ವಿಷ ಸೇವಿಸಿದ್ದು, ವಾಂತಿ ಮಾಡುತ್ತಿರುವುದನ್ನು ಗಮನಿಸಿದ ಮನೆಯವರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ರತ್ನಾವತಿಯ ಹೆಸರಿನಲ್ಲಿ ಸುಳ್ಯದ ಬ್ಯಾಂಕ್ ಒಂದರಲ್ಲಿ ಸಾಲ ಮಾಡಲಾಗಿದ್ದು, ಸಾಲ ಮರುಪಾವತಿಸುವ ಅವಧಿ ಸಮೀಪಿಸಿ ದ್ದರಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾ ಗಿದ್ದರು. ಇದೇ ಕಾರಣದಿಂದ ವಿಷ ಸೇವಿಸಿ ರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

Posted in: Crime News