ಶಂಕಾಸ್ಪದ ವ್ಯಕ್ತಿಗಳ ಸೆರೆ

Posted on April 12, 2011

0


ಮಂಗಳೂರು: ಬಿ.ಸಿ. ರೋಡ್ ಪರಿಸರದಲ್ಲಿ ರಾತ್ರಿ ವೇಳೆ ಶಂಕಾಸ್ಪದವಾಗಿ ತಿರುಗಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ರಾಮಕೃಷ್ಣ ನಗರದ ಅನೀಸ್ ಖಾನ್ ಮತ್ತು ಶಬೀರ್ ಖಾನ್ ಬಂಧಿತರಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದು, ತಕ್ಷಣ ಹಿಡಿದು ವಿಚಾರಿಸಿದಾಗ ಅಸಮರ್ಪಕ ಉತ್ತರ ನೀಡಿದರೆನ್ನಲಾಗಿದೆ. ಯಾವುದೋ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದಾರೆಂದು ಹೇಳಲಾಗಿದೆ.

Posted in: Crime News