ವಿದ್ಯುತ್ ತಂತಿಗೆ ಲಾರಿ ಡಿಕ್ಕಿ: ಅಪಾರ ನಷ್ಟ

Posted on April 12, 2011

0


ಮಂಗಳೂರು: ಲಾರಿಯೊಂದು ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಾರ ನಷ್ಟ ಉಂಟಾದ ಘಟನೆ ನಿನ್ನೆ ಕಟಪಾಡಿ ಪಂಚಾಯತ್ ಮುಂಭಾಗದಲ್ಲಿ ನಡೆದಿದೆ.

ಲಾರಿ ಡಿಕ್ಕಿ ಹೊಡೆದಿದ್ದೂ ಅಲ್ಲದೆ ತಂತಿಯನ್ನು ದೂರದವರೆಗೆ ಎಳೆದುಕೊಂಡು ಹೋಗಿತ್ತು. ಇದರಿಂದ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಕೆಲವು ತಂತಿಕಂಬಗಳು ಧರೆಗು ರುಳಿ ಲಕ್ಷ ರೂ. ಮೊತ್ತದ ಸೊತ್ತು ಹಾನಿ ಸಂಭವಿಸಿದೆ ಎನ್ನಲಾಗಿದೆ. ಕಾಪು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Posted in: Crime News