ಯುವತಿ ಶಂಕಾಸ್ಪದ ಸಾವು

Posted on April 12, 2011

0


ಮಂಗಳೂರು: ಕಾಞಂಗಾಡ್ ಸಮೀಪದ ಚಿಮೇಣಿ ಗ್ರಾ.ಪಂ. ವ್ಯಾಪ್ತಿಯ ಪುಂಡುಪೊಯಿಲ್ ಎಂಬಲ್ಲಿನ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಹಿಂದೆ ನಿಗೂಢತೆಯಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಹೆತ್ತವರು ಆಗ್ರಹಿಸಿದ್ದಾರೆ. ಮಾರ್ಚ್ ೧೦ರಂದು ಸೌಮ್ಯ(೨೨) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೈಯೂರು ಯುವಕನೋರ್ವ ಕಳೆದ ಹಲವಾರು ದಿನಗಳಿಂದ ಈಕೆಯೊಂದಿಗೆ ಸಂಪರ್ಕ ವಿರಿಸಿ, ದೂರವಾಣಿ ಮೂಲಕ ಮಾತನಾ ಡುತ್ತಿದ್ದ ಎನ್ನಲಾಗಿದೆ. ಈಕೆಗೆ ಸಾವಿಗೆ ಸ್ಪಷ್ಟ ಕಾರಣವಿರಲಿಲ್ಲ ಎಂದು ದೂರಿರುವ ಹೆತ್ತವರು ಜಿಲ್ಲಾಧಿಕಾರಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Posted in: Crime News