ಮಂಗಳೂರು ಒನ್ಗೂ ನುಗ್ಗಿದ ಕಳ್ಳರು!

Posted on April 12, 2011

0


ಮಂಗಳೂರು: ಇದುವರೆಗೆ ಖಾಸಗಿ ವ್ಯಾಪಾರಿ ಕೇಂದ್ರಗಳನ್ನು ಗುರಿ ಯಾಗಿಟ್ಟುಕೊಂಡು ಅಲ್ಲಿರುವ ಹಣ-ವಸ್ತುಗಳನ್ನು ನುಂಗಿ ನೀರು ಕುಡಿದಿರುವ ಕಳ್ಳರು ಇದೀಗ ತಮ್ಮ ಗಮನವನ್ನು ಸರಕಾರಿ ಇಲಾಖೆಗಳಿಗೂ ಹರಿಸಿದ್ದಾರೆ. ಮೊನ್ನೆ ರಾತ್ರಿ ನಗರ ಪಾಲಿಕೆ ಕಟ್ಟಡಕ್ಕೂ ಕನ್ನ ಹಾಕಿರುವುದು ಇದಕ್ಕೆ ಸ್ಪಷ್ಟ ಉದಾ ಹರಣೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ನಾಗರಿಕ ಸೇವಾ ಕೇಂದ್ರ ಮಂಗಳೂರು ಒನ್ ಕಚೇರಿ ಯ ಹಿಂದಿನ ಕಿಟಕಿಯನ್ನು ಒಡೆಯುವ ಮೂಲಕ ಕಳ್ಳರು ಕನ್ನ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ೨,೭೫,೦೦೦ ನಗದು ಮತ್ತು ಎರಡು ಚೆಕ್‌ಗಳನ್ನು ಕಳ್ಳರು ಎಗರಿಸಿದ್ದಾರೆ ಎಂದು ಬರ್ಕೆ ಠಾಣೆಗೆ ದೂರು ನೀಡಲಾಗಿದೆ.

Posted in: Crime News