ಬೆಳ್ತಂಗಡಿ: ಪೋಸ್ಟ್‌ಮೆನ್ ಆತ್ಮಹತ್ಯೆ

Posted on April 12, 2011

0


ಮಂಗಳೂರು: ಬೆಳ್ತಂಗಡಿ ಸಮೀಪದ ಕಾಪಿನಡ್ಕ ಪ್ರಧಾನ ಪೋಸ್ಟ್ ಆಫೀಸ್‌ನ ಪೋಸ್ಟೆಮೆನ್ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ.

ಮೃತರನ್ನು ಬಾಬು ದಾಸ(೪೩) ಎಂದು ಗುರುತಿಸಲಾಗಿದ್ದು, ಇವರು ಕಳೆದ ೨೫ ವರ್ಷಗಳಿಂದ ಇಲ್ಲಿನ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರವೂ ಮನೆಯಿಂದ ಕೆಲಸಕ್ಕೆಂದು ತೆರಳಿದ್ದ ಇವರು ನಾಪತ್ತೆಯಾಗಿದ್ದರು. ಇವರ ಮೃತದೇಹ ತಾಯಿಯ ಮನೆ ಸಮೀಪದ ಕಾಪಿನಡ್ಕ-ದಡ್ಡಲಪಲ್ಕೆ ಎಂಬಲ್ಲಿ ಪತ್ತೆಯಾಗಿದೆ. ವಿಷ ಪದಾರ್ಥ ಅಥವಾ ನಿದ್ದೆ ಮಾತ್ರೆಯನ್ನು ಸೇವಿಸಿ ಸಾವಿಗೆ ಶರಣಾಗಿರಬೇಕೆಂದು ಶಂಕಿಸಲಾಗಿದ್ದು, ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

Posted in: Crime News