ಪಿಸ್ತೂಲು ಸಹಿತ ಯುವಕನ ಸೆರೆ

Posted on April 12, 2011

0


ಉಡುಪಿ: ನಗರದಿಂದ ಉದ್ಯಾವರದೆಡೆಗೆ ಬೈಕಿನಲ್ಲಿ ಪಿಸ್ತೂಲು ಮತ್ತು ಸಜೀವ ಗುಂಡಿ ನೊಂದಿಗೆ ತೆರಳುತ್ತಿದ್ದ ಮೂಡು ತೋನ್ಸೆ ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ (೩೬)ಎಂಬಾತನನ್ನು ಅಪರಾಧ ಪತ್ತೆ ವಿಭಾಗದ ಸಂಪತ್ ಕುಮಾರ್ ನೇತೃತ್ವದ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ದ್ದಾರೆ. ನಿನ್ನೆ ಬೆಳಿಗ್ಗಿನ ವೇಳೆ ಮಾಹಿತಿ ಪಡೆದಿದ್ದ ಪೊಲೀಸರು ಬಲಾಯಿಪಾದೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಗೆ ಉತ್ತರಪ್ರದೇಶದ ವರು ಪಿಸ್ತೂಲು ನೀಡಿದ್ದರೆಂಬ ಅಂಶ ಬಹಿರಂಗಪಡಿಸಿದ್ದಾನೆ. ರಿಚರ್ಡ್ ಈ ಹಿಂದೆ ೨೦೦೮ರಲ್ಲಿ ಇತರ ಮೂರು ಜನರೊಂದಿಗೆ ಸೇರಿ ಅಪಹರಣ ಪ್ರಕರಣವೊಂದರ ಆರೋಪಿಯಾಗಿದ್ದ, ಪ್ರಕರಣದ ತನಿಖೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಹಫ್ತಾ ವಸೂಲಿಗಾಗಿ ತೆರಳುತ್ತಿದ್ದ

ಯಾವುದೇ ಗ್ಯಾಂಗಿನಲ್ಲಿ ಗುರುತಿಸಿಕೊಳ್ಳದಿರುವ ರಿಚರ್ಡ್ ಹಣಕ್ಕಾಗಿ ಏನು ಬೇಕಾದರೂ ಮಾಡಲು ಸೈ ಎನ್ನುತ್ತಿದ್ದನೆನ್ನಲಾಗಿದೆ. ಇದು ಪ್ರಕರಣದಲ್ಲಿಯೂ ಉದ್ಯಮಿ ಯೊಬ್ಬರಿಂದ ಹಫ್ತಾ ವಸೂಲಿಗೆ ತೆರಳುತ್ತಿದ್ದನೆನ್ನಲಾಗಿದೆ. ಕೊಡದೇ ಇದ್ದಲ್ಲಿ ಬೆದರಿಕೆ ಒಡ್ಡುವ ನಿಟ್ಟಿನಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದನೆಂದು ತಿಳಿದುಬಂದಿದೆ. ಪೊಲೀಸರು ರಿಚರ್ಡ್‌ನನ್ನು ಬಂಧಿಸಿದ ಬಳಿಕ ಠಾಣೆಗೆ ಈತನನ್ನು ಬಿಡುವಂತೆ ಒತ್ತಾಯಿಸಿ ರಾಜಕೀಯ ವ್ಯಕ್ತಿಯೋರ್ವರ ದೂರವಾಣಿ ಕರೆಬಂದಿತ್ತು. ಇದರಿಂದ ಈತನ ಹಿಂದೆ ದೊಡ್ಡ ಜಾಲವೇ ಇರುವುದರಲ್ಲಿ ಸಂಶಯವಿಲ್ಲವೆಂಬ ಮಾತುಗಳು ಪೊಲೀಸ್ ವಲಯದಿಂದ ಕೇಳಿಬಂದಿದೆ.

Posted in: Crime News