ಗಾಳಿಗೆ ಅಪಾರ ನಷ್ಟ: ಸಿಡಿಲು ಬಡಿದು ಗಾಯ

Posted on April 12, 2011

0


ಮಂಗಳೂರು: ಕುಂದಾಪುರ ತಾಲೂಕಿನ ವಿವಿಧೆಡೆ ರವಿವಾರ ಸಂಜೆ ಹಠಾತ್ತನೆ ಬೀಸಿದ ಭಾರೀ ಗಾಳಿಗೆ ಅಪಾರ ನಷ್ಟ ಉಂಟಾಗಿದ್ದು, ಒಬ್ಬರು ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಸಿಡಿಲಿಗೆ ಹೊಸಂಗಡಿ ಗ್ರಾಮದ ಸುಧಾಕರ್ ಕುಲಾಲ್ ಎಂಬವರು ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಜತ್ತೂರು ಗ್ರಾಮದಲ್ಲಿ ಬಾಳೆ-ಅಡಕೆ ತೋಟಗಗಳಿಗೆ ಹಾನಿಯಾಗಿದ್ದು, ಇಲ್ಲಿನ ಅಣ್ಣಯ್ಯ ನಾಯ್ಕ ಎಂಬವರ ತೋಟದ ಬಾಳೆಯ ಗಿಡಗಳೆಲ್ಲವೂ ಉರುಳಿ ಸುಮಾರು ಮೂರು ಲಕ್ಷ ರೂ. ನಷ್ಟ ಸಂಭವಿಸಿದೆ. ಭಾರತಿ ಎಂಬವರ ತೋಟಕ್ಕೂ ಹಾನಿಯಾಗಿದ್ದು, ಬಾಳೆ ಗಿಡಗಳು ಉರುಳಿ ೧.೫ಲಕ್ಷ ರೂ. ನಷ್ಟ ಉಂಟಾಗಿದೆ. ಕೆಲವರ ಮನೆಯ ಹೆಂಚು ಹಾರಿಹೋಗಿದೆ.

ಯುವತಿಗೆ ಲೈಂಗಿಕ ಕಿರುಕುಳ: ಯುವತಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಕಾಞಂಗಾಡ್ ಅರವಂಜಾಲು ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಇರಿಟ್ಟಿ ನಿವಾಸಿ ಜೇಸನ್ ಜೋಸೆಫ್ ಹಾಗೂ ತೋರೋತ್ ನಿವಾಸಿ ಜಯನ್ ಎಂದು ಗುರುತಿಸಲಾಗಿದೆ. ಇವರು ಯುವತಿಗೆ ಕಳೆದ ಕೆಲವು ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು.

Posted in: Crime News