ಕುಸಿಯುತ್ತಿರುವ ಗಣಿರೆಡ್ಡಿಗಳ ಶಕ್ತಿ

Posted on April 12, 2011

0


ಬೆಂಗಳೂರುಃ ದೇಶದ ರಾಜ ಕಾರಣದಲ್ಲಿ ದೈತ್ಯ ಶಕ್ತಿಗಳಂತೆ ಮೆರೆ ಯುವ ಕುರುಹು ತೋರಿಸಿದ್ದ ಗಣಿರೆಡ್ಡಿಗಳ ಶಕ್ತಿ ಇದೀಗ ಪಾತಾಳಕ್ಕೆ ಕುಸಿಯುತ್ತಿದೆಯೇ.

ಹಾಗೆಂಬ ಪ್ರಶ್ನೆ ಎದುರಾಗಲೂ ಕಾರಣವಿದೆ.ಕೇವಲ ನಾಲ್ಕು ವರ್ಷಗಳ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ಅವರ ಪುತ್ರನ ಜತೆಗೂಡಿ ಆಂಧ್ರದ ಕಡಪಾದ ಬಳಿ ಬ್ರಾಹ್ಮಿಣಿ ಸ್ಟೀಲ್ ಕಂಪನಿ ಪ್ರಾರಂಭಿಸಲು ಮುಂದಾಗಿದ್ದ ರೆಡ್ಡಿಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದರು.

ಸುಮಾರು ಇಪ್ಪತ್ತೈದು ಸಾವಿರ ಕೋಟಿ ರೂ ಗಳ ಬಂಡವಾಳದೊಂದಿಗೆ ಗಣಿರೆಡ್ಡಿಗಳು ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜತೆ ಪಾಲುದಾರಿಕೆಯಲ್ಲಿ ಈ ಕಂಪೆನಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದಾಗ ಅವರ ದುಡ್ಡಿನ ತಾಖತ್ತಿನ ಬಗ್ಗೆಯೇ ವ್ಯಾಪಕ ಚರ್ಚೆಗಳಾಗಿದ್ದವು. ಮುಂದೆ ಗಣಿರೆಡ್ಡಿಗಳು ಕರ್ನಾಟಕದ ರಾಜ ಕೀಯದಲ್ಲಿ ದೊಡ್ಡ ಮಟ್ಟದಲ್ಲೇ ಎದ್ದು ನಿಂತರು.

ಆದರೆ ಇದೀಗ ಗಣಿರೆಡ್ಡಿಗಳು ಕಡಪಾ ಹಾಗೂ ಕರ್ನಾಟಕದಲ್ಲಿ ಪ್ರಾರಂ ಭಿಸಲುದ್ದೇಶಿಸಿದ್ದ ಬ್ರಾಹ್ಮಿಣಿ ಸ್ಟೀಲ್ ಇಂಡ ಸ್ಟ್ರೀಸ್ ಅನ್ನು ಉತ್ತಮ್ ಗಾಲ ಸ್ಟೀಲ್ಸ್ ಕಂಪನಿಗೆ ಮಾರಲು ಮುಂದಾ ಗುವು ದರೊಂದಿಗೆ ಗಣಿರೆಡ್ಡಿಗಳ ಸಾಮ್ರಾಜ್ಯ ಕುಸಿಯುತ್ತಿದೆ ಎಂಬ ಮಾತು ರಾಜ ಕೀಯ ವಲಯದಿಂದ ಕೇಳಿ ಬರುತ್ತಿದೆ.

Posted in: State News