ಇಬ್ಬರ ಸಾವಿಗೆ ಕಾರಣನಾಗಿದ್ದ ಚಾಲಕ, ಕಾರು ಪೊಲೀ ಸರ ವಶಕ್ಕೆ

Posted on April 12, 2011

0


ಮೂಡುಬಿದ್ರೆ: ಭಾನುವಾರ ರಾತ್ರಿ ಇಲ್ಲಿನ ಮರಿಯಾಡಿ ಎಂಬಲ್ಲಿ ಬೈಕಿಗೆ ಢಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾಗಿ ಪರಾರಿಯಗಿದ್ದ ಇಂಡಿಕಾ ಕಾರು ಮತ್ತು ಆರೋಪಿ ಚಾಲಕನನ್ನು ಮೂಡಬಿದ್ರೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾ ಗಿದ್ದಾರೆ. ಕೋಟೆಬಾಗಿಲಿನ ಮೋಹನ್ ದಾಸ್ ಎಂಬಾತನೇ ಈ ಪ್ರಕರಣದ ಆರೋಪಿ.

ಎಂ.೧೦ ರ ಭಾನುವಾರ ರಾತ್ರಿ ಮೂಡ ಬಿದ್ರೆಯಿಂದ ಶಿರ್ತಾಡಿಗೆ ಬೈಕ್‌ನಲ್ಲಿ ಹೋಗು ತ್ತಿದ್ದ ಶಿರ್ತಾಡಿಯ ಕಜೆ ನಿವಾಸಿ ಗಳಾದ ಸತೀಶ ಕ್ರಾಸ್ತಾ ಮತ್ತು ವಿಠಲ ನಾಯ್ಕ್ ಎಂಬವರಿಗೆ ಶಿರ್ತಾಡಿ ಕಡೆಯಿಂದ ಬರು ತ್ತಿದ್ದ ಇಂಡಿಕಾ ಕಾರು ( ಕೆಎ – ೦೧ಸಿ ೯೨೧೧) ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಢಿಕ್ಕಿ ಹೊಡೆದ ಪರಿಣಾಮ ಸತೀಶ್ ಮತ್ತು ವಿಠಲ ನಾಯ್ಕ್ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ವೇಳೆ ಮಳೆ ಕೂಡಾ ಬರುತ್ತಿದ್ದ ಕಾರಣ, ರಸ್ತೆ ಬದಿ ಯಾರು ಇರಲಿಲ್ಲ. ಕಾರಿನ ಗುರುತು ಹಿಡಿಯುವುದೂ ಅಸಾಧ್ಯ ವಾಗಿತ್ತು. ಹಾಗೆ ಢಿಕ್ಕಿ ಹೊಡೆದ ಇಂಡಿಕಾ ಕಾರಿನ ಚಾಲಕ ಮೋಹನದಾಸ್ ಮೂಡ ಬಿದ್ರೆಯ ಬಲ್ಲಾಳ್ ಹೋಟೆಲ್‌ನಲ್ಲಿ ಇಬ್ಬರನ್ನು ಪಿಕಪ್ ಮಾಡಿ ಅವರನ್ನು ಮಂಗಳೂರಿಗೆ ಬಿಟ್ಟು ಬಂದು, ಕೋಟೆ ಬಾಗಿಲಿನ ತನ್ನ ಮನೆಯಲ್ಲಿ ಕಾರನ್ನು ನಿಲ್ಲಿಸಿದ್ದರು.

ಮಾಹಿತಿ ಪಡೆದ ಮೂಡಬಿದ್ರೆ ಎಸ್.ಐ ರಮೇಶ ಕುಮಾರ್ ಮತ್ತು ಪೊಲೀಸರು ಕಾರು ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸತೀಶ್ ಕ್ರಾಸ್ತಾ ವೃತ್ತಿಯಲ್ಲಿ ಚಾಲಕರಾಗಿದ್ದು ಅವರ ಆರು ತಿಂಗಳ ಮಗುವಿಗೆ ಕೊಂಡು ಹೋಗುತ್ತಿದ್ದ ತಿಂಡಿ, ಔಷಧಿ ರಸ್ತೆಯಲ್ಲೇ ಎಸೆಯಲ್ಪಟ್ಟಿತ್ತು. ವಿಠಲ ನಾಯ್ಕ್ ಕೃಷಿಕರಾಗಿದ್ದು, ಸಾಧು ಸ್ವಭಾವದವರಾಗಿದ್ದರು. ಇಬ್ಬರ ಅಂತಿಮ ಕ್ರಿಯೆ ಸೋಮವಾರ ಶಿರ್ತಾಡಿಯಲ್ಲಿ ನಡೆದಿದೆ.

Posted in: Crime News