ಅನುಮಾನಾಸ್ಪದ ವ್ಯಕ್ತಿಯ ಬಂಧನ

Posted on April 12, 2011

0


ಪುತ್ತೂರು: ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಆದಿತ್ಯವಾರ ತಡರಾತ್ರಿಯ ವೇಳೆ ಬೈಕೊಂದರಲ್ಲಿ ಅನುಮಾನಾಸ್ಪ ದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಮಾಡ್ನೂ ರು ಗ್ರಾಮದ ಅಮ್ಚಿನಡ್ಕ ನಿವಾಸಿ ಅಬ್ದುಲ್ ಮಜೀದ್ ಬಂಧಿತ ವ್ಯಕ್ತಿ.

ರಾತ್ರಿ ವೇಳೆ ಗಸ್ತು ನಿರತರಾಗಿದ್ದ ಪುತ್ತೂರು ನಗರ ಠಾಣಾಧಿಕಾರಿ ಶ್ರೀಕಾಂತ್ ಮತ್ತು ಸಿಬ್ಬಂದಿ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಬೈಕೊಂದರಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತದ್ದ ಅಬ್ದುಲ್ ಮಜೀದ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಆ ವೇಳೆ ಆತ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ಪೊಲೀ ಸರು ಅನುಮಾನದ ಮೇಲೆ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ತಿಳಿದು ಬಂದಿದೆ.

Posted in: Crime News