‘ಮುಸ್ಸಂಜೆ ಮಾತು‘ ಈಗ ವೈವಾಹಿಕ ಬಂಧನದವರೆಗೆ…!

Posted on April 12, 2011

0


ಮಂಗಳೂರು: ಸುಳ್ಯ ತಾಲೂಕಿನ ತೋಡಿಕಾನದ ಯುವಕನೋರ್ವ ನಟಿ ಸುದೀಪ್ ಅವರ ಅಭಿಮಾನಿ ಯಾಗಿದ್ದು, ಇದೀಗ ಸುದೀಪ್‌ನ ಮುಸ್ಸಂಜೆ ಮಾತು ಸಿನಿಮಾ ಶೈಲಿಯಲ್ಲಿಯೇ ತನ್ನ ಪೆರುವಾಜೆಯ ಅಭಿಮಾನಿ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ತೋಡಿಕಾನದ ತೀರ್ಥರಾಮ ಎಂಬವರಿಗೆ ಚಿಕ್ಕವನಾಗಿದ್ದಲೇ ಸುದೀಪ್ ಅವರ ಸಿನಿಮಾ ನೋಡುವುದೆಂದರೆ ಬಹಳ ಪ್ರೀತಿ. ಹಾಗೆಯೇ ಆಕಾಶವಾಣಿಯಲ್ಲಿ ಬರುವ ಕಾರ್ಯಕ್ರಮಗಳನ್ನು ಕೇಳುವುದು ಮತ್ತು ಅದರಲ್ಲಿ ಬರುವ ಫೋನ್‌ಇನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇವರ ಹವ್ಯಾಸವಾಗಿತ್ತು.

ತೀರ್ಥರಾಮರಿಗೆ ಕಳೆದ ಹಲವು ವರ್ಷಗಳಿಂದ ರೇಡಿಯೋ ಕೇಳುವಾಗ ಸದಾ ಕೇಳುತ್ತಿದ್ದ ದ್ವನಿ ಎಂದರೆ ಪೆರುವಾಜೆಯ ಶೀಲಾವತಿಯದ್ದು.ಆಕೆ ಕೂಡಾ ತೀರ್ಥರಾಮನಂತೆ ಫೊನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇದರಿಂದಾಗಿ ಇವರಿಬ್ಬರು ಕೇವಲ ಸ್ವರದಲ್ಲಿಯೇ ತಮ್ಮನ್ನು ಪರಿಚಯ ಮಾಡಿಕೊಂಡು ನಂತರ ಪರಸ್ಪರ ಮಾತನಾಡಲಾ ರಂಬಿಸಿದರು. ಪರಸ್ಪರ ಮುಖ ಪರಿಚಯ ಇಲ್ಲದೆಯೇ ಇವರಿಬ್ಬರ ನಡುವೆ ಪ್ರೇಮಾಂಕುರಗೊಂಡಿತ್ತು. ಇವರ ವಿವಾಹಕ್ಕೆ ಜಾತಿಯ ತಡೆಗೋಡೆ ಅಡ್ಡಲಾಗಿದ್ದರೂ ಇವರಿಬ್ಬರೂ ಯಾವುದನ್ನೂ ಲೆಕ್ಕಿಸದೆ ಸಿನಿಮಾ ಶೈಲಿಯಲ್ಲೇ ತಮ್ಮ ನಿಜ ಜೀವನದಲ್ಲೂ ವಿವಾಹವಾಗಿದ್ದಾರೆ. ಇವರ ಅಪರೂಪದ ಮದುವೆಗೆ ರೇಡಿಯೋ ಆರ್‌ಜೆಗಳೂ ಬಂದು ಶುಭ ಹಾರೈಸಿದ್ದಾರೆ.

Advertisements