೨೫೦ ಅಡಿ ಅಳಕ್ಕೆ ಬಿದ್ದ ಕಾರು: ಮಹಿಳೆ ಬಲಿ

Posted on April 12, 2011

0


ಕಾರ್ಕಳ: ಮಾಳ ಯುಪಿ ಬಾರ್ಡರ್ ಬಳಿಯ ಮೂಳೂರು ಘಾಟಿಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು ೨೫೦ ಅಡಿ ಅಳಕ್ಕೆ ಬಿದ್ದ ಪರಿಣಾಮವಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಕಾಪು ಪಡುಬಿದ್ರಿಯ ಅಮಿನಾಬಿ (೬೦) ಮೃತರು. ದರ್ಗಾ ಸಂದರ್ಶನ ಕ್ಕಾಗಿ ಸಂಬಂಧಿಕರು ಎರಡು ಕಾರು ಗಳಲ್ಲಿ ಶಿವಮೊ ಗ್ಗಕ್ಕೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಚಾಲಕ ಇಲಿಯಾಸ್‌ನ ನಿಯಂತ್ರಣ ತಪ್ಪಿದುದರಿಂದ ಕಾರು ಸುಮಾರು ೨೫೦ ಅಡಿ ಅಳಕ್ಕೆ ಬಿತ್ತೆಂದು ತಿಳಿದುಬಂದಿದೆ. ಹಿಂಬದಿಯಿಂದ ಬಂದಿದ್ದ ಮತ್ತೊಂದು ಕಾರಿನ ಪ್ರಯಾ ಣಿಕರು ಘಟನೆ ಬಗ್ಗೆ ಕಾರ್ಕಳ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದಿರುವು ದರಿಂದ ಭಾರೀ ದೊಡ್ಡ ಅನಾಹುತ ವೊಂದು ತಪ್ಪಿದೆ. ಅಗ್ನಿಶಾಮಕ ಠಾಣಾ ಧಿಕಾರಿ ನವೀನ್‌ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳು ಗಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿ ಸುವಲ್ಲಿ ನೆರವಾಗಿದ್ದರು. ಆಲೀಖ್, ರೆಹಮತ್, ಇಸ್ಮಾಯಿಲ್, ಅಯಿಷಾ, ಶಾಹಿದ್ ಮೊದಲಾದವರು ಗಾಯಗೊಂಡವರು.

Advertisements
Posted in: Crime News