ಹೆಬ್ರಿ: ಪತ್ನಿಯ ಕೊಲೆಯತ್ನ

Posted on April 12, 2011

0


ಮಂಗಳೂರು: ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಶೇಡಿಮನೆ ಎಂಬಲ್ಲಿ ನಡೆದಿದೆ. ಶೇಡಿಮನೆಯ ಪೂರ್ಣಿಮಾ (೩೧) ಎಂಬಾಕೆ ಐದು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಕಲಗೂಡು ಸರಗೂರ್ ಎಂಬಲ್ಲಿಯ ಆನಂದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯ ಬಳಿಕ ಆತ ಕುಡಿದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದನೆನ್ನಲಾಗಿದೆ. ಇದರಿಂದ ಮನನೊಂದ ಪೂರ್ಣಿಮ ಗಂಡನ ಮನೆಯನ್ನು ತೊರೆದು ತವರಿಗೆ ಬಂದಿದ್ದಳು. ಅಲ್ಲಿಗೂ ಬಂದಿದ್ದ ಆನಂದ ಚಾಕುವಿನಿಂದ ಪೂರ್ಣಿಮಾರ ತೊಡೆ ಕೈ ಹಾಗೂ ಮೂಗಿಗೆ ತಿವಿದು ಪರಾರಿಯಾಗಿರುವನೆನ್ನಲಾಗಿದೆ.

Advertisements
Posted in: Crime News