ಸೆಝ್ ಉದ್ಯೋಗ ಭರವಸೆ ಗಡು ಮುಕ್ತಾಯ

Posted on April 12, 2011

0


ಮಂಗಳೂರು: ಸೆಝ್‌ನಿಂದ ಸಂತ್ರಸ್ಥರಾದವರ ಕುಟುಂಬದ ಸದಸ್ಯರಿಗೆ ಉದ್ಯೋಗ ಒದಗಿಸುವ ಅಧಿಕಾರಿಗಳ ಭರವಸೆಯ ಅವಧಿ ಮುಗಿದಿದ್ದರೂ ಉದ್ಯೋಗ ಒದಗಿಸುವ ಕುರಿತ ಯಾವ ಬೆಳವಣಿಗೆಯೂ ಕಾಣಿಸುತ್ತಿಲ್ಲ. ಇದರಿಂದ ಹತಾಶರಾಗಿರುವ ಸಂತ್ರಸ್ಥರು ಇನ್ನೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಮಂಗಳೂರು ವಿಶೇಷ ಆರ್ಥಿಕ ವಲಯದ ಯೋಜನೆಗಾಗಿ ಭೂಮಿ ಕಳೆದುಕೊಂಡ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಮಾ.೧ರಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ೨೫ ದಿನಗಳ ಕಾಲ ಸಂತ್ರಸ್ತರು ಧರಣಿ ನಡೆಸಿದ್ದರು. ಧರಣಿಗೆ ಮಣಿದ ಅಧಿಕಾರಿಗಳು ಸಭೆ ನಡೆಸಿ ಎರಡು ವಾರಗಳ ಒಳಗೆ ಉದ್ಯೋಗ ನೀಡುವ ಕುರಿತು ಲಿಖಿತ ಭರವಸೆ ನೀಡಿದ್ದರು.

Advertisements