ಸಾನಿಯಾ-ವೆಸ್ನೀನಾ ಜೋಡಿಗೆ ಪ್ರಶಸ್ತಿ

Posted on April 12, 2011

0


ಚಾರ್ಲ್‌ಸ್ಟನ್: ಭಾರತದ ಸಾನಿಯಾ ಮಿರ್ಜಾ ಮತ್ತು ರಷ್ಯಾದ ಎಲೆನಾ ವೆಸ್ನೀನಾ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ಗೆದ್ದು ಕೊಂಡಿದೆ. ಇದೇ ಜೋಡಿ ಮೂರು ವಾರದ ಹಿಂದೆಯಷ್ಟೇ ಇಂಡಿ ಯನ್ ವೆಲ್ಸ್ ಟೂರ್ನಿ ಪ್ರಶಸ್ತಿ ಗೆದ್ದು ಕೊಂಡಿತ್ತು.

ಸಾನಿಯಾ-ವೆಸ್ನೀನಾ ಜೋಡಿ ಅಮೆರಿಕಾದ ಬೆಥನಿ ಮೆಟೆಕ್ ಹಾಗೂ ಮೇಘನ್ ಶಾಗ್ನೆಸ್ಸಿ ಜೋಡಿಯನ್ನು ೬-೪,೬-೪ ಅಂತರದಲ್ಲಿ ಸೋಲಿ ಸಿತು. ಆರಂಭದಲ್ಲಿ ಅಮೆರಿಕನ್ ಜೋಡಿಯ ಎದುರು ೫-೧ರ ಮುನ್ನಡೆ ಹೊಂದಿದ್ದ ಸಾನಿಯಾ ಜೋಡಿ ಆನಂತರ ಆಮೆರಿಕನ್ ಜೋಡಿಯ ಜಬರ್‌ದಸ್ತ್ ಆಟದಿಂದಾಗಿ ಈ ಅಂತರ ೫-೪ಕ್ಕೆ ಇಳಿಯಿತು. ಎರಡನೇ ಸೆಟ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಸಾನಿಯಾ-ವೆಸ್ನೀನಾ ಜೋಡಿ ಒಂದು ಹಂತದಲ್ಲಿ ೪-೦ ಅಂತರ ಕಾಯ್ದು ಕೊಂಡಿತು. ಆದರೆ ಆನಂತರ ಎದು ರಾಳಿ ಜೋಡಿ ಅದ್ಭುತ ಆಟದ ಪ್ರದರ್ಶ ನ ನೀಡಿತು. ೪-೪ಕ್ಕೆ ಸಮಬಲ ಮಾಡಿ ತಾದರೂ ಸಾನಿಯಾ-ವೆಸ್ನೀನಾ ಜೋಡಿ ಉತ್ತಮ ಆಟವಾಡಿ ಪ್ರಶಸ್ತಿ ಗೆದ್ದುಕೊಂಡಿತು.

Advertisements
Posted in: Sports News