ಶೇನ್‌ವಾಟ್ಸನ್ ಸೆನ್ಸೆಷನ್!

Posted on April 12, 2011

0


ಮೀರ್‌ಪುರ್: ನಿನ್ನೆ ಅಕ್ಷರಶ: ಶೇನ್ ವಾಟ್ಸನ್ ದಿನ. ಮೀರ್‌ಪುರ್ ಸ್ಟೇಡಿಯಂ ಮೇಲೆ ಬಾಲ್ ಬೀಳುತಿತ್ತು. ಬಾಂಗ್ಲಾ ದ ಬೌಲರ್‌ಗಳನ್ನು ಆಸ್ಟೇಲಿಯಾದ ಶೇನ್ ವಾಟ್ಸನ್ ನಿರ್ದಯತೆಯಿಂದ ದಂಡಿಸುತ್ತಿದ್ದರೆ ಬಾಂಗ್ಲಾ ಆಟಗಾರರ ಮುಖದಲ್ಲಿ ಕಳೆಯಿರಲಿಲ್ಲ. ಬಾಂಗ್ಲಾ ದೇಶದೆದುರಿನ ಎರಡನೇ ಏಕದಿನ ಪಂದ್ಯಾಟದಲ್ಲಿ ಶೇನ್ ವಾಟ್ಸನ್ ವೇಗದ ರನ್ ಗಳಿಕೆಯ ಎಲ್ಲಾ ಇತಿ ಹಾಸಗಳನ್ನು ಅಳಿಸಿ ಹೊಸ ಇತಿಹಾಸ ಬರೆದರು.

ಗೆಲ್ಲಲು ೨೩೦ರನ್‌ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು ೨೬ ಓವರ್‌ನಲ್ಲಿ ಗುರಿ ಮುಟ್ಟಿತು. ಇದರಲ್ಲಿ ಶೇನ್ ವಾಟ್ಸನ್ ಕೇವಲ ೯೬ರನ್‌ನಲ್ಲಿ ಅಜೇಯ ೧೮೫ರನ್ ಸೇರಿತ್ತು. ೧೫ ಬೌಂಡರಿ ಮತ್ತು ೧೫ ಸಿಕ್ಸರ್‌ನೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶೇನ್ ವಾಟ್ಸನ್ ತನ್ನದೇ ದೇಶದ ಮ್ಯಾಥ್ಯೂ ಹೇಡನ್ ನ್ಯೂಜಿಲ್ಯಾಂಡ್ ಎದುರು ಬಾರಿಸಿದ ವೈಯಕ್ತಿಕ ಸರ್ವಾಧಿಕ ಮೊತ್ತ ೧೮೧ರ ದಾಖಲೆಯನ್ನು ಅಳಿಸಿಹಾಕಿದರು. ಮಾತ್ರವಲ್ಲ ಏಕದಿನ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸಿಕ್ಸ್ ಗಳಿಸಿದ ದಾಖಲೆ ಹೊಂದಿರುವ ೨೦೦೮ರಲ್ಲಿ ವೆಸ್ಟ್ ಇಂಡೀಸ್‌ನ ಕ್ಸೇವಿಯರ್ ಮಾರ್ಷಲ್ ಅವರ ೧೩ಸಿಕ್ಸ್‌ನ ದಾಖಲೆಯನ್ನೂ ಮುರಿದಿದ್ದಾರೆ.

ಶೇನ್ ಜನವರಿಯಲ್ಲಿ ಇಂಗ್ಲಂಡ್ ಎದುರು ೧೬೧ರನ್ ಬಾರಿಸಿದ್ದರು. ೨೯ರ ಹರೆಯದ ಶೇನ್ ವಾಟ್ಸನ್ ಸಿಕ್ಸ್‌ನಲ್ಲಿ ದಾಖಲೆ ಮಾಡಿರುವುದು ತನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಬಾಂಗ್ಲಾ ಆಸ್ಟ್ರೇಲಿಯಾ ಎದುರು ಮೂರು ಏಕದಿನಗಳನ್ನು ಆಡಲಿದ್ದು ಈಗಾಗಲೇ ಎರಡು ಏಕದಿನವನ್ನು ಆಸ್ಟ್ರೇಲಿಯನ್ನರು ಗೆದ್ದುಕೊಂಡಿದ್ದಾರೆ.

Advertisements
Posted in: Sports News