ಶಾಲಾ ಕಾರ್ಯಕ್ರಮಕ್ಕೆ ರಾಜಕಾರಣಿ-ಅಧಿಕಾರಿಗಳು ಚ ಕ್ಕರ್: ಇನೋಳಿ ನಾಗರಿಕರ ಅಸಮಾಧಾನ

Posted on April 12, 2011

0


ಮಂಗಳೂರು: ಪಾವೂರು ಗ್ರಾಮದ ಇನೋಳಿ ಶಾಲೆಯ ಕೊಠಡಿ ಮತ್ತು ರಂಗಮಂದಿರ ಉದ್ಘಾಟನೆಯ ಸಂಭ್ರ ಮದ ಕಾರ್ಯಕ್ರಮಗಳಲ್ಲಿ ರಾಜಕಾ ರಣಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸುವ ಭರವಸೆ ನೀಡಿ ಚಳ್ಳೆಹಣ್ಣು ತಿನ್ನಿಸಿದ್ದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿನ ಜಿ.ಪಂ ಪ್ರಾಥಮಿಕ ಶಾಲೆಗೆ ಐವತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಇತ್ತೀಚೆಗೆ ನಿರ್ಮಾಣಗೊಂಡ ಶಾಲಾ ಕೊಠಡಿ ಮತ್ತು ರಂಗಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಅಯೋಜಿಸಲಾ ಗಿತ್ತು. ಇದಕ್ಕಾಗಿ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ವಿದ್ಯಾಭಿಮಾನಿಗಳು ಕೆಲವು ತಿಂಗಳ ಹಿಂದಿ ನಿಂದಲೇ ಅಹೋರಾತ್ರಿ ದುಡಿದಿದ್ದರು.

ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿ ಗಳ ಜೊತೆಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿ ಸಲಾಗಿತ್ತು. ಇದರ ನೆಪದಲ್ಲಾದರೂ ಇವರು ಬಂದು ಊರಿನ ಹಾಗೂ ಶಾಲೆಯ ಬಗ್ಗೆ ತಿಳಿದುಕೊಳ್ಳಲಿ ಎಂಬು ದು ಸಂಘಟಕರ ಉದ್ದೇಶವಾಗಿತ್ತು.

ಇದುವರೆಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಮಾತ್ರವೇ ಮುಖ ನೋಡಿದ್ದ ಜನರು ಜನಪ್ರತಿನಿಧಿಗಳು ಊರಿನ ಶಾಲೆಗೆ ಆಗಮಿಸಿದ ಸಂದರ್ಭ ಅವರನ್ನು ಪ್ರತ್ಯಕ್ಷವಾಗಿ ಕಂಡು ಊರಿನ ಸಮಸ್ಯೆಗಳ ಬಗ್ಗೆ ತಿಳಿಸಬೇಕು ಎಂದೆಲ್ಲಾ ಯೋಚನೆ ಮಾಡಿದ್ದರು. ಆದರೆ ಬೆಳ ಗ್ಗಿನ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾಗಿದ್ದ ಸಂಸದ ನಳಿನ್ ಕುಮಾರ್, ಪಾವೂರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವನ್ನು ಮಿಸ್ ಮಾಡದ ಶಾಸಕ ಖಾದರ್, ಜಿ. ಪಂಗೆ ಚೊಚ್ಚಲ ಪ್ರವೇಶ ಕಂಡು ಅಧ್ಯಕ್ಷರಾಗಿರುವ ಶೈಲಜಾ ಭಟ್ ಅವರ ಜೊತೆಗೆ ತಾಲೂಕು ಸಹಾಯಕ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ ಅವರೂ ನಾಪತ್ತೆಯಾಗಿದ್ದರು.

ಇನ್ನು ಅವರು ಸಂಜೆಯ ಕಾರ್ಯ ಕ್ರಮಕ್ಕಾದರೂ ಬರುತ್ತಾರೆ ಎಂದು ಕಾದರೂ ಪ್ರಯೋಜವಾಗಲಿಲ್ಲ. ಅವರ ಜೊತೆಗೆ ಸಂಜೆ ಭಾಗವಹಿಸಬೇಕಾಗಿದ್ದ ಕೃಷ್ಣ ಪಾಲೆಮಾರ್ ಅವರು ಕೇರಳದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಕಾರಣ ಹಾಜರಾಗಿರಲಿಲ್ಲ. ಉಳಿದಂತೆ ತಾ.ಪಂ. ಅಧ್ಯಕ್ಷೆ ಭವ್ಯಾ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಶಿವಪ್ರಕಾಶ್ ಅವರೂ ಕಾರ್ಯಕ್ರಮಕ್ಕೆ ಬಾರದೆ ಚಕ್ಕರ್ ಹೊಡೆದಿದ್ದರು. ರಾಜ ಕಾರಣಿಗಳು ಕೇರಳದಲ್ಲಿ ಪ್ರಚಾರಕ್ಕೆ ಹೋಗಿದ್ದಾರೆ ಎಂಬ ಸಬೂಬು ಸಿಕ್ಕಿ ದರೆ, ಅಧಿಕಾರಿಗಳೂ ಪ್ರಚಾರಕ್ಕೆ ಹೋಗಿ ದ್ದಾರೆಯೇ ಎನ್ನುವ ಲೇವಡಿಯ ಜೊತೆಗೆ ಗ್ರಾಮೀಣ ಭಾಗದ ಶಾಲೆ ಎಂಬ ಕಾರಣಕ್ಕೆ ಚಕ್ಕರ್ ಹೊಡೆದಿದ್ದಾರೆ ಎಂಬ ಆಕ್ರೋಶವೂ ಸ್ಥಳೀಯರದ್ದಾಗಿತ್ತು.

Advertisements