ವಿಧಾನಸಭೆ ಚುನಾವಣೆ ಹಿನ್ನೆಲೆ: ಭಾರಿ ವಿದ್ಯುತ್ ಅಭಾವ

Posted on April 12, 2011

0


ಬೆಂಗಳೂರು: ತಮಿಳುನಾಡು, ಕೇರಳ ರಾಜ್ಯಗಳ ವಿಧಾನಸಭೆ ಚುನಾ ವಣೆ ಹಿನ್ನೆಲೆಯಲ್ಲಿ ರಾಜ್ಯ ಭಾರೀ ವಿದ್ಯು ತ್ ಅಭಾವದಿಂದ ಕಗ್ಗತ್ತಿಲ್ಲಿನತ್ತ ಸಾಗಿದೆ.

ರಾಜ್ಯದಲ್ಲಿ ಸಣ್ಣಪುಟ್ಟ ವಿದ್ಯುತ್ ಉತ್ಪಾದಕರು ನೆರೆಯ ಈ ರಾಜ್ಯಗಳಿಗೆ ದುಬಾರಿ ದರದಲ್ಲಿ ತಮ್ಮ ಉತ್ಪಾದನೆ ಯನ್ನು ಮಾರಾಟ ಮಾಡಿಕೊಳ್ಳುತ್ತಿ ರುವುದರಿಂದ ಸರ್ಕಾರ ಪರೋಕ್ಷವಾಗಿ ಒಂದು ಗಂಟೆಯಿಂದ ಐದು ಗಂಟೆಯ ವರೆಗೂ ಲೋಡ್ ಶೆಡ್ಡಿಂಗ್ ಹೇರಿದೆ.

ಬೇಸಿಗೆಯಲ್ಲಿ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ಈಡೇ ರಿಸಲು ಸಾಧ್ಯವಾಗದಿರು ವುದರಿಂದ ಬೆಂಗ ಳೂರು ನಗರದಲ್ಲಿ ಒಂದು ಗಂಟೆಗಳ ಕಾಲ, ಉಳಿದ ಪಾಲಿಕೆ ಹಾಗೂ ನಗರ/ಪಟ್ಟಣ ಪ್ರದೇಶ ಗಳಲ್ಲಿ ಎರಡು ಗಂಟೆ, ಇನ್ನು ಗ್ರಾಮೀಣ ಪ್ರದೇಶದಲ್ಲಿ ಐದು ಗಂಟೆ ಲೋಡ್ ಶೆಡ್ಡಿಂಗ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಮುಗಿಯು ತ್ತಿದ್ದಂತೆ ಸರ್ಕಾರ ಈ ನಿರ್ಧಾರ ಕೈ ಗೊಂಡಿದೆ.

ಬೇಸಿಗೆ, ವಿದ್ಯಾರ್ಥಿಗಳ ಪರೀಕ್ಷೆ, ಮಳೆಯಿಲ್ಲದಿ ರುವುದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್‌ನ ಬೇಡಿಕೆ ಭಾರೀ ಪ್ರಮಾಣ ದಲ್ಲಿರುವುದರಿಂದ ಪ್ರತಿನಿತ್ಯ ೧೭೫ ಮಿಲಿಯನ್ ಯುನಿಟ್ ವಿದ್ಯುತ್ ಬೇಡಿಕೆ ಬರುತ್ತಿದೆ.

ಆದರೆ ರಾಜ್ಯದ ಐದು ವಿದ್ಯುತ್ ನಿಗಮಗಳು ೧೪೦ ರಿಂದ ೧೫೦ ಮಿಲಿಯನ್ ಯುನಿಟ್‌ವರೆಗೂ ಮಾತ್ರ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ೧೩೦೦ ಮೆಗಾವ್ಯಾಟ್ ವಿದ್ಯುತ್‌ನ್ನು ಹೆಚ್ಚುವರಿಯಾಗಿ ಖರೀದಿ ಮಾಡು ತ್ತಿರುವುದಲ್ಲದೆ ನಮ್ಮ ರಾಜ್ಯದ ಜಲ ವಿದ್ಯುತ್ ನಿಂದ ೪೦ ರಿಂದ ೪೫ ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸುತ್ತಿ ದ್ದರೂ, ಬೇಡಿಕೆ ಈಡೇರಿಸಲು ಸಾಧ್ಯ ವಾಗುತ್ತಿಲ್ಲ. ಇದರ ಮಧ್ಯೆ ನೆರೆ ರಾಜ್ಯದ ತಮಿಳು ನಾಡು ಹಾಗೂ ಕೇರಳದ ಸರ್ಕಾರಗಳು ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕೀಯ ಗಿಮಿಕ್ ಬಳಕೆ ಮಾಡಿ ಕೊಂಡಿರುವುದು ರಾಜ್ಯದ ಜನತೆ ಯನ್ನು ಸಂಕಷ್ಠಕ್ಕೆ ಸಿಲುಕಿಸಿದೆ. ಇಡೀ ರಾಷ್ಟ್ರದಲ್ಲಿ ವಿದ್ಯುತ್ ಅಭಾವ ಕಾಡುತ್ತಿದ್ದು, ತಮಗೆ ಬೇಕಾದ ವಿದ್ಯುತ್ ದೊರೆಯು ದಿರುವುದರಿಂದ ಈ ಎರಡು ಸರ್ಕಾರಗಳು ತಮ್ಮ ಮತದಾರರನ್ನು ಹಿಡಿದಿಟ್ಟುಕೊ ಳ್ಳಲು ದುಭಾರಿ ಬೆಲೆತೆತ್ತು ಖರೀದಿ ಮಾಡುತ್ತಿವೆ. ರಾಜ್ಯದ ಸಣ್ಣ ಉತ್ಪಾದಕರಿಗೆ ಪ್ರತಿ ಯುನಿಟ್‌ಗೆ ೧೪.೨೫ ರೂ. ನೀಡಿ, ಖರೀದಿ ಮಾಡುತ್ತಿರುವುದರಿಂದ ಇವರುಗಳು ನಮ್ಮ ಸರ್ಕಾರಕ್ಕೆ ನೀಡಬೇಕಾಗಿದ್ದನ್ನು ಸ್ಥಗಿತಗೊಳಿಸಿ ತಮಿಳುನಾಡು ಹಾಗೂ ಕೇರಳಗಳಿಗೆ ತಮ್ಮ ಉತ್ಪಾದನೆಯನ್ನು ನೀಡುತ್ತಿವೆ. ಅಲ್ಲದೆ ಕೇಂದ್ರದ ಆದೇಶಗಳನ್ನು ದಿಕ್ಕರಿಸಿ, ರಾಜ್ಯಕ್ಕೆ ಬರುವ ವಿದ್ಯುತ್ ನ್ನು ದುಬಾರಿ ಬೆಲೆತೆತ್ತು ಖರೀದಿಸಿ ತಮ್ಮ ಗ್ರಾಹಕರಿಗೆ ನಿರಂತರ ವಿದ್ಯುತ್ ನೀಡಲು ಮುಂದಾಗಿವೆ.

ಇದರಿಂದ ರಾಜ್ಯ ಸರ್ಕಾರ ಅಸಹಾಯಕತೆಗೆ ಳೊಳ್ಳಗಾಗಿ ಪಯಾರ್ಯ ಮಾರ್ಗದ ಕಡೆ ಗಮನಹರಿಸದೇ ಇರುವ ವಿದ್ಯುತ್‌ನ್ನೇ ಬಳಕೆ ಮಾಡಿ ಕೊಳ್ಳಲು ಲೋಡ್ ಶೆಡ್ಡಿಂಗ್‌ನ್ನು ಜಾರಿಗೊಳಿಸಿದೆ. ಮಳೆ ಬರದೆ ಇದೇ ಪರಿಸ್ಥಿತಿ ಮುಂದುವರೆದರೆ ಮತ್ತಷ್ಟು ಚಿಂತಾಜನಕ ಸ್ಥಿತಿ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisements
Posted in: State News