ರೈಲಿನಡಿ ಸಿಲುಕಿ ಬಾಲಕಿ ಕಾಲು ಜಖಂ

Posted on April 12, 2011

0


ಮಂಗಳೂರು: ರೈಲಿಗೆ ಹತ್ತುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಕಾಸರಗೋಡಿನ ಕಣ್ಣೂರು-ತಿಲ್ಲಂಗೇರಿ ಎಂಬಲ್ಲಿ ನಡೆದಿದೆ.

ತಿಲ್ಲಂಗೇರಿ ನಿವಾಸಿ ಸಾಲಿಯಾ(೧೫) ಎಂಬಾಕೆ ತೃಶ್ಶೂರು ರೈಲು ಗಾಡಿ ಹತ್ತುತ್ತಿದ್ದ ವೇಳೆ ರೈಲು ಏಕಾಏಕಿ ಚಲಿಸಿದ ಪರಿಣಾಮ ಹಳಿಗೆ ಬಿದ್ದ ಆಕೆಯ ಕಾಲಿನ ಮೇಲೆ ರೈಲು ಚಕ್ರಗಳು ಹರಿದಿದ್ದು, ಬಾಲಕಿ ಕಾಲುಗಳನ್ನು ಕಳೆದುಕೊಂಡಿದ್ದಾಳೆ. ಸಾಲಿಯಾ ತನ್ನ ಹೆತ್ತವರ ಜತೆ ಕೊಡಂಗಲ್ಲೂರಿನ ಸಂಬಂಧಿಕರ ಮನೆಗೆ ಹೋಗಿ ರೈಲಿನಲ್ಲಿ ಹಿಂತಿರುಗಿ ಬರುತ್ತಿದ್ದಾಗ ಘಟನೆ ನಡೆದಿದೆ.

ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿ: ಸೋದರನ ಜತೆ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲೆಂದು ತೆರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಕೊಂದ ಘಟನೆ ಕಾಸರಗೋಡಿನ ಪುಲ್‌ವಳ್ಳಿ ಎಂಬಲ್ಲಿ ನಡೆದಿದೆ.

ಪುಲ್‌ವಳ್ಳಿ-ಪೆಳ್ಳುಕೊಲ್ಲಿಯ ಬಾಬು-ಗ್ರೇಸಿ ದಂಪತಿ ಪುತ್ರಿ ರಿನೆಸ್ತಿ(೧೪) ಎಂಬಾಕೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಈಕೆ ಸೋದರನೊಂದಿಗೆ ಸಮೀಪದ ಕೆಥೋಲಿಕ್ ಸಂಡೇ ಸ್ಕೂಲ್‌ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಕಾಡು ಹಂದಿ ತಿವಿದು ಇಬ್ಬರು ಗಂಭೀರ: ಕಾಡು ಹಂದಿ ತಿವಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಾಞಂಗಾಡ್-ಚಿತ್ತಾರಿಕಲ್ ಎಂಬಲ್ಲಿ ನಡೆದಿದೆ.

ಕೃಷಿಕ ಕಂಡತ್ತಿಲ್‌ಕರ ನಿವಾಸಿ ಸಜಿ ಹಾಗೂ ಜೋಸೆಫ್ ಎಂಬವರು ಘಟನೆಯಿಂದ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬದಿಯಡ್ಕ: ಯುವಕರಿಗೆ ಹಲ್ಲೆ: ಚರ್ಲಡ್ಕದ ಚೇಡೆಕಲ್ ಎಂಬಲ್ಲಿ ಯುವಕರ ಮೇಲೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಆಟೋರಿಕ್ಷಾ ಚಾಲಕ ಮತ್ತು ಇತರ ಕೆಲವು ಮಂದಿ ಸೇರಿ ಹಲ್ಲೆಗೈದ ಘಟನೆ ನಡೆದಿದೆ.

ಚೇಡೆಕಲ್ ನಿವಾಸಿಗಳಾದ ಮುರಳಿ, ರತೀಶ್ ಎಂಬವರು ಹಲ್ಲೆ ಕೃತ್ಯದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇವರು ಪೇಟೆಗೆ ಹೋಗಿದ್ದ ವೇಳೆ ರಿಕ್ಷಾವೊಂದು ಅಜಾಗರೂಕತೆಯಿಂದ ಸಂಚರಿಸಿ ತಮಗೆ ಡಿಕ್ಕಿ ಹೊಡೆಯಲು ಬಂದಿದ್ದು, ಈ ವೇಳೆ ಚಾಲಕನನ್ನು ಪ್ರಶ್ನಿಸಿದ್ದೇ ಘಟನೆಗೆ ಕಾರಣವೆನ್ನಲಾಗಿದೆ.

Advertisements
Posted in: Crime News