ಮೊಬೈಲ್ ಕಳ್ಳನ ಸೆರೆ

Posted on April 12, 2011

0


ಮಂಗಳೂರು: ಬಸ್‌ನಲ್ಲಿ ಪ್ರಯಾಣಿಕರ ಜೇಬಿನಿಂದ ಮೊಬೈಲ್ ಎಗರಿಸುತ್ತಿದ್ದ ಆರೋಪಿಯೊರ್ವನನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಂಗಳೂರು ಕುಮಾರಸ್ವಾಮಿ ಲೇಔಟ್‌ನ ನಿವಾಸಿ ರಿಜ್ವಾನ್ ಪಾಷಾ (೨೫) ಎಂದು ಗುರುತಿಸಲಾಗಿದ್ದು, ಆತನಿಂದ ಆರು ಮೊಬೈಲ್ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾ ಗಿದೆ. ಈತ ಬೆಂಗಳೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ಬರುತ್ತಿದ್ದಾಗ ಮಲಗಿದ್ದ ಪ್ರಯಾಣಿಕರ ಜೇಬಿನಿಂದ ಮೊಬೈಲ್ ಎಗರಿಸುತ್ತಿದ್ದ ಎನ್ನಲಾಗಿದೆ. ಬಸ್ ಬಿ.ಸಿ. ರೋಡ್ ತಲುಪುವ ವೇಳೆ ಲಕ್ಷ್ಮಣ ಎಂಬವರ ಮೊಬೈಲ್ ಎಗರಿಸಲು ಯತ್ನಿಸಿದ ಸಂದರ್ಭ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ.

Advertisements
Posted in: Crime News