ಮದ್ಯ ಮತ್ತಷ್ಟು ದುಬಾರಿ

Posted on April 12, 2011

0


ಬೆಂಗಳೂರು: ಮದ್ಯದ ದರಗಳನ್ನು ಶೇಕಡಾ ೧೦ ರಿಂದ ೨೦ ರಷ್ಟು ಹೆಚ್ಚಳ ಮಾಡಲಾಗಿದ್ದು ಇದರಿಂದ ರಾಜ್ಯ ಬೊಕ್ಕಸಕ್ಕೆ ವಾರ್ಷಿಕ ಒಂದು ಸಾವಿರ ಕೋಟಿ ರೂ. ಹೆಚ್ಚು ಆಧಾಯ ಬರಲಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಕಟಿಸಿದ್ದಾರೆ.

ರಾಜ್ಯದ ಸಂಪನ್ಮೂಲವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಮದ್ಯದ ದರಗಳು ಏಪ್ರಿಲ್ ಒಂದರಿಂದಲೇ ಹೆಚ್ಚಳ ಪೂರ್ವಾನ್ವಯ ಜಾರಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮದ್ಯ ದರ ಹೆಚ್ಚಳದ ಜೊತೆಗೆ ಇದರ ಉತ್ಪಾದನಾ ಘಟಕಗಳ ವಾರ್ಷಿಕ ಶುಲ್ಕವನ್ನು ದುಪ್ಪಟ್ಟು ಮಾಡಲಾಗುವುದು.

ನೆರೆಯ ಆಂಧ್ರ,ತಮಿಳುನಾಡು, ಮಹಾರಾಷ್ಟ್ರ,ಕೇರಳ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮದ್ಯದ ದರ ಕಡಿಮೆ ಇದೆ ಎಂದು ಸಮರ್ಥಿಸಿ ಕೊಂಡರು. ಒಂದನೇ ವರ್ಗದ ಮದ್ಯದ ಬೆಲೆ ೩೨.೭೬ ರೂ ಇದ್ದುದನ್ನು ೩೪.೮೬ ರೂಗಳಿಗೆ ಹೆಚ್ಚಳ ಮಾಡ ಲಾಗಿದೆ.ಆದರೆ ನೆರೆಯ ರಾಜ್ಯಗಳಲ್ಲಿ ಈ ದರ ೫೦ ರೂಗಳಿಗೂ ಅಧಿಕವಾಗಿದೆ.

ಒಟ್ಟಾರೆ ಒಂದನೇ ವರ್ಗದಿಂದ ೧೭ನೇ ವರ್ಗದವರೆಗೂ ದರ ಪರಿ ಷ್ಕರಣೆಯಾಗಿದ್ದು, ಇನ್ನು ಮುಂದೆ ಪಾನಪ್ರಿಯರು ೧೮೦ ಎಂಎಲ್‌ಗೆ ೨ ರೂ ನಿಂದ ೨೪ ರೂ.ವರೆಗೆ ಹೆಚ್ಚಳ ತರಬೇಕಾಗುತ್ತದೆ.

Advertisements
Posted in: State News