ಮಂಗಳೂರಿನಲ್ಲಿ ಝಿಮ್ಮರ್ ಮೊಬೈಲ್ ಲರ್ನಿಂಗ್ ಸೆಂ ಟರ್

Posted on April 12, 2011

0


ಮಂಗಳೂರು: ಸಂಧಿವಾತ ರೋಗದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಝಿಮ್ಮರ್ ಸಂಚಾರಿ ಕಲಿಕಾ ಕೇಂದ್ರ (ಝಿಮ್ಮರ್ ಮೊಬೈಲ್ ಲರ್ನಿಂಗ್ ಸೆಂಟರ್) ಎಂಬ ಸಂಚಾರಿ ವಾಹನ, ಏಪ್ರಿಲ್ ೬ರಿಂದ ಕರ್ನಾಟಕದಾದ್ಯಂತ ಸಂಚರಿಸಿ, ಜನರಲ್ಲಿ ಸಂಧಿವಾತ ಹಾಗೂ ಈ ಸಂಬಂಧಿ ವಿಚಾರ ಮತ್ತು ಚಿಕಿತ್ಸೆಗಳ ಬಗೆಗೆ ತಿಳುವಳಿಕೆ ಮೂಡಿಸುತ್ತಿದೆ.

ಈ ಅಭಿಯಾನ ದಡಿಯಲ್ಲಿ ಇದೀಗ ಝಿಮ್ಮರ್ ಸಂಚಾರಿ ಕಲಿಕಾ ಕೇಂದ್ರದ ವಾಹನವು ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ನಗರದ ಯುನಿಟಿ ಆಸ್ಪತ್ರೆ, ತೇಜಸ್ವಿನಿ ಆಸ್ಪತ್ರೆ ಮತ್ತು ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ತಂಗಿ, ಇಲ್ಲಿನ ಮೂಳೆ ತಜ್ಞರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಮಂಡಿ ಚಿಪ್ಪು ಜೋಡಣೆ, ಮೂಳೆ ಸವೆತ ಹಾಗೂ ಗಾಯಗಳ ಚಿಕಿತ್ಸಾ ವಿಧಾನಗಳ ಕುರಿತಂತೆ ತರಬೇತಿ ನೀಡುತ್ತಿದೆ.

Advertisements