ಬೈಕ್-ಒಮ್ನಿ ಡಿಕ್ಕಿ: ಇಬ್ಬರಿಗೆ ಗಾಯ

Posted on April 12, 2011

0


ಪುತ್ತೂರು: ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಬೈಕ್ ಮತ್ತು ಎದುರು ಕಡೆಯಿಂದ ಬರುತ್ತಿದ್ದ ಮಾರುತಿ ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ಆದಿತ್ಯವಾರ ಪುತ್ತೂರು ಬೆಳ್ಳಾರೆ ರಸ್ತೆಯಲ್ಲಿ ತಿಂಗಳಾಡಿ ಸಮೀಪ ಸಂಭವಿಸಿದೆ. ಬೈಕ್ ಸವಾರ ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ಖಲಂದರ್(೨೦) ಮತ್ತು ಮಾರುತಿ ಓಮ್ನಿ ಚಾಲಕ ಸುಳ್ಯ ಅಜ್ಜಾವರ ನಿವಾಸಿ ಸತ್ಯನಾರಾಯಣ(೪೫) ಗಾಯಗೊಂಡವರು. ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಬೈಕ್-ವ್ಯಾನ್ ಡಿಕ್ಕಿ; ಸವಾರರಿಗೆ ಗಾಯ: ಬೈಕ್ ಮತ್ತು ಮಾರುತಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಆದಿತ್ಯವಾರ ಸಂಭವಿಸಿದೆ.

ವಿವೇಕಾನಂದ ಇಂಜಿನಿಯ ರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿರುವ ಕ್ಯಾಂಟೀನ್ ಉದ್ಯೋಗಿಗಳಾದ ಕಾರ್ಕಳ ತಾಲೂಕಿನ ಶಿವಪುರ ನಿವಾಸಿ ಪ್ರವೀಣ್(೨೩) ಮತ್ತು ಶೃಂಗೇರಿಯ ಎನ್.ಆರ್. ಪುರ ನಿವಾಸಿ ನಂದ ಕುಮಾರ್(೨೭) ಗಾಯಗೊಂಡವರು . ಇವರಿಬ್ಬರು ಬೈಕ್‌ನಲ್ಲಿ ಪುತ್ತೂರು ಪೇಟೆಗೆ ಆಗಮಿಸುತ್ತಿದ್ದ ವೇಳೆ ಅಫಘಾತ ಸಂಭವಿಸಿದೆ. ಗಾಯಾಳು ಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisements
Posted in: Crime News