ಬೆತ್ತಲಾಗುವುದಿಲ್ಲ: ಪೂನಂ

Posted on April 12, 2011

0


ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ತಾನು ಬೆತ್ತಲಾಗುವುದಾಗಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡ ಪೂನಂ ಪಾಂಡೆ ಇದೀಗ ಕಾನೂನಿಗೆ ಬೆದರಿ ಎಲುಬಿಲ್ಲದ ನಾಲಗೆಯಲ್ಲಿ ತಪ್ಪಾಗಿ ಹೇಳಿಕೊಂಡೆ ಎಂದು ಕ್ಷಮಾಪನೆ ಕೇಳುವ ಮೂಲಕ ಬೆತ್ತಲಾಗುವುದಿಲ್ಲ ಎಂದು ಹೇಳಿರುವುದರಿಂದ ಈಕೆಯನ್ನು ನೋಡಲು ಬಕ ಪಕ್ಷಿಗಳಂತೆ ಕಾಯುತ್ತಿದ್ದ ರಸಿಕರಿಗೆ ಭಾರಿ ನಿರಾಸೆ ಉಂಟಾಗಿದೆ.

ಸಾಮಾಜಿಕ ಸಂಪರ್ಕ ತಾಣವಾದ ಟ್ವಿಟರ್‌ನಲ್ಲಿ ಪುಂಖಾನುಪುಂಖವಾಗಿ ತನ್ನ ಮನಸ್ಸಿನ ತುಮುಲಗಳನ್ನು ಬರೆದುಕೊಂಡಿರುವ ಪೂನಂ, ನನ್ನ ತಪ್ಪಿನ ಅರಿವಾಗಿದೆ. ಪ್ರಾಯಶ್ಚಿತ್ತಕ್ಕಾಗಿ ನಾನು ಅಜ್ಞಾತವಾಸಕ್ಕೆ ತೆರಳಿದ್ದೇನೆ ಎಂದು ಕ್ಷಮಾಪಣಾ ಭಾವ ವ್ಯಕ್ತಪಡಿಸಿದ್ದಾಳೆ.

ಭಾರತದಂತಹ ಶ್ರೀಮಂತ ಸಂಸ್ಕೃತಿ ಹೊಂದಿರುವ ದೇಶದಲ್ಲಿ ನಾನು ಗೌರವಯುತವಾದ ಹೇಳಿಕೆ ನೀಡಬೇಕಿತ್ತು. ಆದರೆ ನನ್ನ ಎಲುಬಿಲ್ಲದ ನಾಲಿಗೆ ಆಡಬಾರದ ಮಾತನ್ನು ಹೇಳಿಸಿತು. ಈ ತಪ್ಪಿಗಾಗಿ ನಾನು ಅಜ್ಞಾತವಾಸ ಕೈ ಗೊಂಡಿರುವುದಾಗಿ ಬರೆದುಕೊಂಡಿದ್ದಾಳೆ.

ಪೂನಂ ಪಾಂಡೆಯ ಹೇಳಿಕೆಯಿಂದ ಫುಲ್ ಖುಷ್ ಆಗಿ ಜೋಷ್‌ನಲ್ಲಿದ್ದ ಪಡ್ಡೆ ಹುಡುಗರಿಗಂತೂ ಭಾರೀ ನಿರಾಸೆ ಉಂಟಾಗಿರುವುದು ಸುಳ್ಳಲ್ಲ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಕ ಪಕ್ಷಿಗಳಂತೆ ಕಾಯುತ್ತಿದ್ದ ಸಾವಿರಾರು ಮಂದಿ ಭಾರತ ಟ್ರೋಫಿ ಗೆದ್ದರೂ ಮಾತು ತಪ್ಪಿದ ಪೂನಂ ನಾಪತ್ತೆಯಾಗಿದ್ದಳು. ನಂತರ ತಾನು ಟೀಂ ಇಂಡಿಯಾ ಎದುರು ಮಾತ್ರ ಬೆತ್ತಲಾಗಲು ಸಿದ್ದ ಎಂದು ಉಲ್ಟಾ ಹೊಡೆದಿದ್ದಳು. ಅಂತೂ ಇಂತೂ ವರಸೆ ಬದಲಿಸಿದ್ದ ಪೂನಂ ಪ್ರಕರಣಕ್ಕೆ ಇತಿಶ್ರೀ ಹಾಡಲು ತಾನು ಅಜ್ಞಾತವಾಸ ಮಾಡುವುದಾಗಿ ತಿಳಿಸಿದ್ದಾಳೆ.

Advertisements
Posted in: National News