ಬಾಡಿಗೆ ನಿಯಂತ್ರಣ ಕಾಯ್ದೆ ರಚಿಸಿ

Posted on April 12, 2011

0


ಮಂಗಳೂರು: ನಗರದಲ್ಲಿ ಹೆಚ್ಚು ತ್ತಿರುವ ವಾಣಿಜ್ಯ ವಹಿವಾಟುಗಳಿಂ ದಾಗಿ ಜನಸಂಖ್ಯೆ ವಿಪರೀತವಾಗಿ ಏರಿಕೆ ಯಾಗುತ್ತಿದೆ. ಇವುಗಳನ್ನೇ ಬಳಸಿ ಕೊಂಡು ಬಾಡಿಗೆ ಮನೆಯ ಮಾಲೀ ಕರು ಮನೆ ಬಾಡಿಗೆ ದರವನ್ನು ಬೇಕಾ ಬಿಟ್ಟಿ ಏರಿಸುತ್ತಿದ್ದಾರೆ. ಏರಿಕೆಯಾಗಿರುವ ಮನೆ ಬಾಡಿಗೆ ದರವನ್ನು ಭರಿಸಲಾಗದ ಬಡ ಮತ್ತು ಕೆಳಮಧ್ಯಮ ವರ್ಗದ ಜನತೆ ಬಾಡಿಗೆ ಮನೆ ತೊರೆದು ಬೀದಿಗೆ ಬೀಳೋ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಗೆ ಮನೆ ಬಾಡಿಗೆ ನಿಯಂತ್ರಣ ಕಾಯ್ದೆ ರದ್ದುಗೊಳಿಸಿರುವ ಸರಕಾರದ ನೀತಿಯೇ ಕಾರಣ ಎಂದು ಡಿವೈಎಫ್‌ಐ ನಗರ ಅಧ್ಯಕ್ಷರಾದ ಬಿ ಕೆ ಇಮ್ತಿಯಾಜ್ ಆರೋಪಿಸಿದ್ದಾರೆ.

ಅವರು ಉರ್ವಸ್ಟೋರ್ ಡಿವೈ ಎಫ್‌ಐ ಘಟಕವು ಮನೆ ನಿವೇಶನ ವಿತರಿಸಲು, ಮನೆ ಬಾಡಿಗೆ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸಿಸುತ್ತಿರು ವವರಿಗೆ ಹಕ್ಕು ಪತ್ರ ವಿತರಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ವಾರ್ಡ್ ಮಟ್ಟದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಡಿವೈಎಫ್‌ಐ ನಗರ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಅಧ್ಯಕ್ಷ ಪ್ರಶಾಂತ್ ಎಂ ಬಿ, ನಗರ ಉಪಾಧ್ಯಕ್ಷ ಪ್ರಶಾಂತ್ ಆಚಾರ್ ಉಪಸ್ಥಿತರಿದ್ದರು. ಸ್ಥಳಿಯ ನಿವೇಶನ ರಹಿ ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisements