ಫ್ರಾನ್ಸ್‌ನಲ್ಲಿ ಬುರ್ಖಾ ಸಂಪೂರ್ಣ ನಿಷೇಧ: ಮುಸ ್ಲಿಮರ ಆಕ್ರೋಶ

Posted on April 12, 2011

0


ಪ್ಯಾರಿಸ್: ಯುರೋಪ್ ಒಕ್ಕೂಟ ರಾಜ್ಯಗಳಲ್ಲಿ ಅತ್ಯಧಿಕ ಮುಸ್ಲಿಂ ಜನ ಸಂಖ್ಯೆಯನ್ನು ಹೊಂದಿರುವ ಫ್ರಾನ್ಸ್‌ನಲ್ಲಿ ಮುಸಲ್ಮಾನ ಮಹಿಳೆಯರು ಇನ್ನು ಮುಂದೆ ಬುರ್ಖಾ ಧರಿಸುವಂತಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಮುಖ ಮುಚ್ಚಿಕೊಳ್ಳುವಂತಹ ಸಮವಸ್ತ್ರವನ್ನು ಯಾವುದೇ ಸಮುದಾಯದವರು ಧರಿ ಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ಸೋಮವಾರದಿಂದ ಜಾರಿ ಯಾಗಿದೆ. ಯುರೋಪಿನ ಹಲವು ರಾಜ್ಯಗಳು ಬುರ್ಖಾ ನಿಷೇಧಿಸುವ ಉದ್ದೇಶ ಹೊಂದಿದೆಯಾದರೂ, ಫ್ರಾನ್ಸ್ ಈ ನಿಯಮವನ್ನು ಪ್ರಪ್ರಥಮ ವಾಗಿ ಕಾರ್ಯ ರೂಪಕ್ಕೆ ತಂದಿದೆ.

ಈಗಾಗಲೇ ಫ್ರಾನ್ಸ್ ಸರಕಾರದ ವಿರುದ್ಧ ಮುಸಲ್ಮಾನರು ಸಿಡಿದೆದ್ದಿದ್ದು, ಬಲಪಂಥೀಯರ ಮತಗಳಿಸುವ ಏಕೈಕ ಓಲೈಕೆಗಾಗಿ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಇಸ್ಲಾಂ ಧರ್ಮವನ್ನು ಕಡೆ ಗಣಿಸುತ್ತಿದ್ದಾರೆ ಎಂದು ಆರೋಪಿಸಿವೆ. ನಾಲ್ಕರಿಂದ ಐದು ದಶಲಕ್ಷ ಮುಸಲ್ಮಾ ನರಿರುವ ಇಲ್ಲಿ ಕೇವಲ ೨೦೦೦ಕ್ಕಿಂತ ಕಡಿಮೆ ಮಹಿಳೆಯರು ಬುರ್ಖಾ ಧರಿಸುತ್ತಿದ್ದಾರೆ.

Advertisements