ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಕಳ್ಳನಿ ಗೆ ನ್ಯಾಯಾಂಗ ಬಂಧನ

Posted on April 12, 2011

0


ಮಂಗಳೂರು:ಎರಡು ಬಾರಿ ಪೊಲೀಸ್ ಬೆಂಗಾವಲಿನಿಂದ ತಪ್ಪಿಸಿಕೊಂಡ ಕುಖ್ಯಾತ ಅಂತಾರಾಜ್ಯ ಕಳ್ಳ ಕಾಸರಗೋಡಿನ ಉಪ್ಪಳದ ಬಡಾಯಿತೊಟ್ಟಿಯ ರಫೀಕ್ ಯಾನೆ ಕಾಲಿಯಾ ರಫೀಕ್(೩೫)ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕದ್ರಿ ಪೊಲೀಸರು ಪದವು ಬಳಿ ಸ್ಕಾರ್ಪಿಯೊ ಕಾರು ನಿಂತಿದ್ದನ್ನು ಗಮನಿಸಿ ಅಲ್ಲಿಗೆ ತೆರಳಿದಾಗ ಅದರ ಚಾಲಕ ವಾಹನದಿಂದ ಇಳಿದು ಹೋದ. ಪೊಲೀಸರು ವಾಹನವನ್ನು ತಪಾಸಣೆ ನಡೆಸಿದಾಗ ಅದರೊಳಗೆ ವ್ಯಕ್ತಿಯೊಬ್ಬ ಕುಳಿತಿದ್ದ. ಆತನಲ್ಲಿ ವಿಚಾರಿಸಿದಾಗ ಆಸ್ಪತ್ರೆಗೆ ಹೋಗಲು ಹೊಟಿರುವುದಾಗಿ ಪೊಲೀಸರಿಗೆ ತಿಳಿಸಿದನೆನ್ನಲಾಗಿದೆ. ವಾಹನದಲ್ಲಿ ಎರಡು ನಂಬರ್ ಪ್ಲೇಟ್ ಇದ್ದುದನ್ನು ಕಂಡ ಪೊಲೀಸರು ಈ ಬಗ್ಗೆ ಆತನಲ್ಲಿ ವಿಚಾರಿಸಿದಾಗ ಆತ ಸಮರ್ಪಕವಾದ ಉತ್ತರ ನೀಡದಿದ್ದುದನ್ನು ಗಮನಿಸಿ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನನ್ನು ತಖೆ ನಡೆಸಿದಾಗ ಆತ ತನ್ನ ಹೆಸರು ರಫೀಕ್ ಯಾನೆ ಕಾಲಿಯಾ ರಫೀಕ್ ಎಂದು ತಿಳಿಸಿದ. ರಫೀಕ್ ಮತ್ತು ಆತನ ಸಹಚರ ಟಿ.ಎಚ್. ರಿಯಾಜ್ ಈ ಹಿಂದೆ ಚಿಕ್ಕಮಗಳೂರು ಜೈಲಿನಲ್ಲಿದ್ದು, ಕಳೆದ ಮಾ. ಆರರಂದು ಚಿಕ್ಕಮಗಳೂರು ಪೊಲೀಸರು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲು ಕೊಂಡೊಯ್ಯುತ್ತಿ ದ್ದಾಗ ಚಾಣಾಕ್ಷತೆ ಯಿಂದ ರಫೀಕ್ ತಪ್ಪಿಸಿಕೊಂಡು ಪರಾರಿಯಾಗಿದ್ದನೆನ್ನ ಲಾಗಿದೆ. ಇಬ್ಬರು ಆರೋಪಿಗಳು ಈ ಹಿಂದೆ ಬೆಳ್ತಂಗಡಿ ಯಿಂದ ಸ್ಕಾರ್ಪಿಯೊ ವಾಹನವೊಂ ದನ್ನು ಕಳವು ಮಾಡಿ ದ್ದರು. ಈ ವಾಹನದಲ್ಲಿ ತಿರುಗಾಡು ತ್ತಿದ್ದ ಸಂದಭ ಕುಂಬ್ಳೆ ಬಳಿ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆ ಯಿತು. ಅಲ್ಲಿ ತಪ್ಪಿಸ ಲೆತ್ನಿಸಿದಾಗ ರಿಯಾಜ್ ಪೊಲೀಸರ ಬಲೆಗೆ ಬಿದ್ದರೆ, ರಫೀಕ್ ತಪ್ಪಿಸಿ ಕೊಂಡು ಪರಾರಿಯಾಗಿದ್ದನು. ಕೊಲೆ, ದರೋಡೆ ಸೇರಿದಂತೆ ಸುಮಾರು೨೩ ಪ್ರಕರಣಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಈತನ ಮೇಲೆ ದಾಖಲಾಗಿವೆ. ಇದೀಗ ಕದ್ರಿ ಪೊಲೀಸರ ಬಲೆಗೆ ಬಿದ್ದಿರುವ ರಫೀಕ್ ಎಂಬಾತನನ್ನು ತನಿಖೆ ನಡೆಸಿದ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಎ.೨೪ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Advertisements
Posted in: Crime News