ನೀರಿನ ಗಲಾಟೆ ಹೊಕೈ ತನಕ

Posted on April 12, 2011

0


ಮಂಗಳೂರು: ಪಂಚಾಯತ್ ವತಿಯಿಂದ ಹಿಂದೆ ಇದ್ದಂತಹ ಬೋರ್‌ವೆಲ್‌ನ್ನು ದುರಸ್ತಿಗೊಳಿಸುವ ವೇಳೆ ಅಡ್ಡಿಪಡಿಸಿದ ಸ್ಥಳೀಯರಿಂದ ಶುರುವಾದಂತಹ ಗಲಾಟೆ ಹೊಕೈ ವರೆಗೆ ತಲುಪಿರುವ ಘಟನೆ ಮುಡಿಪು ಬಳಿಯ ಸಾಂಬಾರುತೋಟ ಎಂಬಲ್ಲಿ ಸಂಭವಿಸಿದೆ.

ಪಜೀರು ಪಂಚಾಯತ್ ವ್ಯಾಪ್ತಿಯ ಸಾಂಬಾರುದೋಟದಲ್ಲಿ ಸಾರ್ವಜನಿ ಕರಿಗೆ ನೀರಿನ ಅಭಾವವಿದ್ದುದರಿಂದ ಮನವಿ ಮೇರೆಗೆ ಹಿಂದೆ ಇದ್ದಂತಹ ಬೋರ್‌ವೆಲ್ ಅನ್ನು ದುರಸ್ತಿಗೊಳಿಸಲು ನಿನ್ನೆ ಸಂಜೆ ವೇಳೆ ಪಂಚಾಯತ್ ಮುಂದಾಗಿತ್ತು. ಕೆಲಸ ಶುರು ಹಚ್ಚುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಸ್ಥಳೀಯರೇ ಆದ ಹಸನ್ ಮತ್ತು ಇಬ್ರಾಹಿಂ ಎಂಬವರು ರಾತ್ರಿ ವೇಳೆ ಕೆಲಸ ಮಾಡುವುದರಿಂದ ಶಬ್ದದಿಂದ ಮನೆಯೊಳಗೆ ನಿಲ್ಲಲು ಸಾಧ್ಯವಿಲ್ಲ. ಅಲ್ಲದೆ ಇಬ್ರಾಹಿಂ ಮನೆ ಹಿಂದೆ ಹಸನ್ ಎಂಬವರ ಬೋರ್‌ವೆಲ್ ಇದ್ದು ಇದರಲ್ಲಿ ನೀರು ಕಡಿಮೆಯಾಗುವ ಭೀತಿಯಿಂದ ಕೆಲಸಕ್ಕೆ ಅಡ್ಡಿಪಡಿಸಿದರು. ಇಬ್ಬರನ್ನು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ತರಾಟೆಗೆ ತೆಗೆದು ಕೊಂಡರು. ಪಟ್ಟು ಬಿಡದ ಇಬ್ರಾಹಿಂ ಮತ್ತು ಹಸನ್ ಕೆಲಸ ಮಾಡಲು ಬಿಡದ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಹೊಕೈ ನಡೆಯಿತೆನ್ನಲಾಗಿದೆ. ಬಳಿಕ ಹಸನ್ ಅವರು ತನ್ನ ಬೋರ್‌ವೆಲ್‌ನಲ್ಲಿ ಈಗಾಗಲೇ ನೀರು ಇದೆ. ಅದರಿಂದಾಗಿ ೪೦ ಮನೆಮಂದಿಜೀವನ ನಿರ್ವಹಿಸುತ್ತಿ ದ್ದಾರ. ಆದರೆ ಮೊದಲೇ ನೀರಿಲ್ಲದ ಬೋರ್‌ವೆಲ್ ಅನ್ನು ಸರಿಪಡಿಸಿ ತನ್ನ ಬೋರ್‌ವೆಲ್‌ನಲ್ಲಿ ಮತ್ತು ದುರಸ್ತಿಗೊಳಿ ಸುವ ಬೋರ್ ವೆಲ್‌ನಲ್ಲಿಯೂ ನೀರಿಲ್ಲ ದಂತಾದರೆ ಅದರ ಜವಾಬ್ದಾರಿಯನ್ನು ಪಂಚಾಯತ್ ಹೊರುತ್ತದೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟರೆನ್ನಲಾಗಿದೆ.

Advertisements