ದಿನಸಿಗೆ ಬಂದವರು ನಗದು ದೋಚಿದರು!

Posted on April 12, 2011

0


ವಿಟ್ಲ: ದಿನಸಿ ಅಂಗಡಿಯಿಂದ ಸಾಮಾನು ಖರೀದಿಸುವ ನೆಪದಲ್ಲಿ ಮೋಟಾರ್ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ಅಂಗಡಿ ಮಾಲೀಕರನ್ನು ವಂಚಿಸಿ ೩೦ ಸಾವಿರ ನಗದು ದೋಚಿ ಪರಾರಿಯಾದ ಘಟನೆ ಕೇಪು ಗ್ರಾಮದ ಮೈರ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಕೇಪು ಗ್ರಾಮದ ಮೈರ ಎಂಬಲ್ಲಿಯ ಅಬ್ದುಲ್ ರಹಿಮಾನ್ ಹಾಜಿ ಯಾನೆ ಅದ್ರಾಮ(೬೦) ಅವರು ತಮ್ಮ ಮನೆಯ ಸಮೀಪದಲ್ಲಿಯೇ ಅಂಗಡಿ ಹಾಗೂ ಕೋಳಿ ಫಾರ್ಮ್ ಹೊಂದಿದ್ದು, ಸೋಮವಾರ ಮಧ್ಯಾಹ್ನ ೧೧.೩೦ ಗಂಟೆಯ ಸುಮಾರಿಗೆ ಅಡ್ಯನಡ್ಕ ಕಡೆಯಿಂದ ಕಪ್ಪು ಬಣ್ಣದ ಹೀರೋ ಹೋಂಡಾ ಗ್ಲಾಮರ್ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಅಂಗಡಿಯಿಂದ ೧೦ ಕೆ.ಜಿ ಅಕ್ಕಿ, ೧೦ ಕೆ.ಜಿ ಹಿಂಡಿ ಬೇಕೆಂದು ಮಲಯಾಳ ಭಾಷೆಯಲ್ಲಿ ಹೇಳಿ ಅದನ್ನು ಪ್ಯಾಕ್ ಮಾಡಿದ ನಂತರ ಕೋಳಿಬೇಕೆಂದು ತಿಳಿಸಿದರು. ಈ ಕೋಳಿ ಫಾರ್ಮ್ ಮನೆಯ ಸಮೀಪದಲ್ಲಿಯೇ ಇದ್ದು, ಅವರು ನಗದು ಇದ್ದ ಮೇಜಿನ ಡ್ರಾವರ್‌ಗೆ ಬೀಗ ಹಾಕಿ ಆ ಕಡೆ ಹೋಗುತ್ತಿದ್ದಂತೆ ಅವರ ಬಳಿಯಿದ್ದ ಚೂರಿಯ ಸಹಾಯದಿಂದ ಬೀಗ ಮುರಿದು ಅದರೊಳಗಿದ್ದ ೩೦ ಸಾವಿರ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಉಕ್ಕುಡ ಎಂಬಲ್ಲಿ ಅಂಗಡಿಯೊಂದರಲ್ಲಿ ಇದೇ ರೀತಿಯಲ್ಲಿ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.

Advertisements
Posted in: Crime News