ದಾರಿ ವಿವಾದ: ಹಲ್ಲೆ

Posted on April 12, 2011

0


ಮಂಗಳೂರು: ದಾರಿ ವಿವಾದಕ್ಕೆ ಸಂಬಂಧಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಅಲ್ಲದೆ ವ್ಯಕ್ತಿಯೊಬ್ಬರ ಮೇಲೆ ನೆರೆಮನೆಯವರು ಹಲ್ಲೆ ನಡೆಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಾವರ-ತಡೆಕಲ್ಲು ಎಂಬಲ್ಲಿ ನಡೆದಿದೆ.

ನೀಲಾವರ ಗ್ರಾಮದ ತಡೆಕಲ್ಲು ನಿವಾಸಿ ಸದಾಶಿವ ಶೆಟ್ಟಿ(೬೦) ಎಂಬವರು ತಮ್ಮ ಮಗ ಸುಧೀರ್ ಜತೆ ಸೇರಿ ಮನೆಯ ದಾರಿಯನ್ನು ಬಂದ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯರೇ ಆಗಿರುವ ಶಿವರಾಮ ಶೆಟ್ಟಿ ಹಾಗೂ ವಸಂತ ಶೆಟ್ಟಿ ರಸ್ತೆ ಬಂದ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಗಳು ಸುಧೀರ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisements
Posted in: Crime News