ತುಳುಕೂಟ ಪ್ರತಿಭಾ ಪುರಸ್ಕಾರ

Posted on April 12, 2011

0


ಮಂಗಳೂರು: ಅವಿಭಜಿತ ದ. ಕ. ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ನೀಡಲಾ ಗುವ ೨೦೧೦ನೇ ಸಾಲಿನ ತುಳುಕೂಟ ಪ್ರತಿಭಾ ಪುರಸ್ಕಾರಕ್ಕೆ ವಾಮದಪದವು ಬಿಂದುಶ್ರೀ ರೈ ಮತ್ತು ಮಂಗಳೂರಿನ ಅಭಿಷೇಕ್ ಶೆಟ್ಟಿ ಆಯ್ಕೆಯಾಗಿದ್ದಾರೆ. ತುಳು ಮಾತೃ ಭಾಷಿಕರಿಗೆ ನೀಡುವ ಈ ಪುರಸ್ಕಾರವು ರೂ.೧೦೦೫ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿದೆ. ನಗರದ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮತ್ತು ನಿವೃತ್ತ ಡೆಪ್ಯೂಟಿ ರಿಜಿಸ್ಟ್ರಾರ್ ಚಂದ್ರ ಶೇಖರ ಸುವರ್ಣ ಪ್ರಾಯೋ ಜಿಸಿರುವ ಈ ಪುರಸ್ಕಾರ ವನ್ನು ಏ.೧೪ ರಂದು ನಡೆಯುವ ಬಿಸು ಪರ್ಬ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ತುಳುಕೂಟದ ಕಾರ್ಯದರ್ಶಿ ಕೆ.ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

Advertisements