ತಾಯಿಯ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಮಗ ಆತ್ಮಹ ತ್ಯೆ

Posted on April 12, 2011

0


ಕಾರ್ಕಳ: ಇಲ್ಲಿಗೆ ಸಮೀಪದ ನಿಟ್ಟೆ ಬೋರ್ಗಲ್‌ಗುಡ್ಡೆ ಎಂಬಲ್ಲಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಮಗ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ.

ನಿಟ್ಟೆ ಬೋರ್ಗಲ್‌ಗುಡ್ಡೆಯ ಮಂಜು ನಾಥ ಶೆಟ್ಟಿ(೪೫) ಎಂಬವರು ಆತ್ಮಹತ್ಯೆ ಮಾಡಿ ಕೊಂಡವರು. ತಾಯಿಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲೆಂದು ಕೆಲ ದಿನಗಳ ಹಿಂದೆ ಇವರು ಪತ್ನಿ ಸಮೇತ ಮುಂಬಯಿ ಯಿಂದ ಊರಿಗೆ ಹಿಂತಿರುಗಿದ್ದರು. ಪತ್ನಿ ಸುನಂದಾ ಅವರು ಮೂಡಬಿದ್ರಿ ಶಿರ್ತಾಡಿ ಯಲ್ಲಿರುವ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಇವರು ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಕಳೆದ ಏಳು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರೂ, ಮಕ್ಕಳಾಗದ ಕೊರಗಿ ನಲ್ಲಿ ಅವ ರಿದ್ದರು. ಇದುವೇ ಘಟನೆಗೆ ಕಾರಣ ವೆಂದು ತಿಳಿದು ಬಂದಿದೆ. ಈ ಬಗ್ಗೆ ಗ್ರಾಮಾಂ ತರ ಠಾಣೆಯಲ್ಲಿ ಕೇಸು ದಾಖ ಲಾಗಿದೆ.

Advertisements
Posted in: Crime News