ಜಪ್ಪಿನಮೊಗರುವಿನಲ್ಲಿ ಬಂಟ ಕ್ರೀಡೋತ್ಸವ ಉದ್ಘಾ ಟನೆ

Posted on April 12, 2011

0


ಮಂಗಳೂರು: ಬಂಟರ ಸಂಘ ಜಪ್ಪಿನ ಮೊಗರು (ರಿ)ಇದರ ೨೦ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಥಳೀಯ ಸಮಾಜ ಭಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆ ಬಂಟ ಕ್ರೀಡೋ ತ್ಸವವು ಇತ್ತೀಚೆಗೆ ಜಪ್ಪಿನಮೊಗರು ಬಾಕಿಮಾರು ಮನೆ ಬಳಿಯ ಗದ್ದೆ ಯಲ್ಲಿ ಜರಗಿತು.

ಕ್ರೀಡಾಕೂಟವನ್ನು ಪದ್ಮನಾಭ ಶೆಟ್ಟಿ ಪಂಜಿಮೊಗ್ರು ಗುತ್ತು ಉದ್ಘಾಟಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಎನ್.ರವಿರಾಜ್ ಶೆಟ್ಟಿ, ನವೀನ್‌ಚಂದ್ರ ರೈ, ಪುರುಷೋತ್ತಮ ಭಂಡಾರಿ, ರಾಮಚಂದ್ರ ಆಳ್ವ, ಜಯಂತಿ ಬಿ.ಶೆಟ್ಟಿ ಮನೋಜ್ ಶೆಟ್ಟಿ, ಉಮೇಶ್ ಅತಿಕಾರಿ, ಸಂತೋಷ್ ಆಳ್ವ ಕೆ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರದಾನ ಕಾರ್ಯ ದರ್ಶಿ ಜೆ.ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಮೇಲಾಂಟ ವಂದಿಸಿದರು. ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisements