ಕಡವೆ ಬೇಟೆ: ಓರ್ವನ ಸೆರೆ

Posted on April 12, 2011

0


ಮಂಗಳೂರು: ಸುಳ್ಯ ತಾಲೂಕಿನ ಕರಿಕೆಯ ಪಟ್ಟಿಘಾಟ್ ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಓರ್ವನನ್ನು ಭಾಗಮಂಡಲ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಇನ್ನೋರ್ವ ಪರಾರಿ ಯಾಗಿದ್ದಾನೆ ಎಂದು ಹೇಳಲಾಗಿದೆ.

ಪೆರಾಜೆಯ ಗಂಗಾಧರ ಬಂಧಿತ ಆರೋಪಿಯಾಗಿದ್ದಾನೆ. ದಾಳಿಯ ವೇಳೆ ಲವ ಎಂಬಾತ ಪಾರಾರಿಯಾಗಿದ್ದಾನೆ. ಪಟ್ಟಿಘಾಟ್ ಅರಣ್ಯದಲ್ಲಿ ಬೇಟೆಯಾಡಿ ಕಡವೆಯನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿದ್ದರು. ಪ್ರಕರಣ ದಲ್ಲಿ ಇನ್ನಷ್ಟು ಜನರು ಭಾಗಿಯಾಗಿ ರುವ ಶಂಕೆ ಇದೆ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisements
Posted in: Crime News