ಎಟಿಎಂ ಗಾಜು ಸಿಡಿತ: ಗ್ರಾಹಕರಿಗೆ ಗಾಯ

Posted on April 12, 2011

0


ಮಂಗಳೂರು: ಬ್ಯಾಂಕ್ ಶಾಖೆಯೊಂದರ ಹವಾನಿಯಂತ್ರಿತ ಎಟಿಎಂ ಕೊಠಡಿಯ ಗಾಜು ಇದ್ದಕ್ಕಿದ್ದಂತೆ ಸಿಡಿದು ಗ್ರಾಹಕರೋರ್ವರು ಗಾಯಗೊಂಡ ಘಟನೆ ಪಡುಬಿದ್ರಿಯಲ್ಲಿ ನಿನ್ನೆ ನಡೆದಿದೆ.

ರಾಷ್ಟ್ರೀಕೃತ ವಿಜಯಾ ಬ್ಯಾಂಕ್ ಶಾಖೆಯ ಎಟಿಎಂ ಕೊಠಡಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳೀಯ ಫುಟ್‌ವೇರ್ ಒಂದರ ಮಾಲಕ ಮೋನು ಮಯ್ಯದಿ ಎಂಬವರು ಕಾಲಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದಾಕಾಲ ಆನ್‌ಲೈನ್ ಸಮಸ್ಯೆಗೆ ಒಳಗಾಗುತ್ತಿದ್ದ ಈ ಎಟಿಎಂ, ನಿನ್ನೆ ಚಾಲನೆ ಗೊಂಡಿದ್ದು, ಬ್ಯಾಂಕು ಸಿಬ್ಬಂದಿ ಅದನ್ನು ಪರೀಕ್ಷಿಸುತ್ತಿದ್ದಾಗ ಯಾರೋ ಒಬ್ಬರ ಕಾಲು ತಾಗಿ ಗಾಜು ಒಡೆದಿರಬೇಕೆನ್ನಲಾಗಿದೆ. ಸೀಳಾದ ಗಾಜು ತಾಗಿ ಗ್ರಾಹಕರು ಗಾಯಗೊಳ್ಳುವಂತಾಗಿತ್ತು.

Advertisements
Posted in: Crime News