ಈಶ್ವರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ ನ

Posted on April 12, 2011

0


ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ಆರಂಭಗೊಂಡಿದೆ. ಪಕ್ಷದಲ್ಲಿ ಭಿನ್ನಮತಕ್ಕೆ ಎಡೆಮಾಡಿಕೊಟ್ಟಿರುವವರೇ ಈಶ್ವರಪ್ಪ ಎಂಬ ಆರೋಪದ ಹಿನ್ನಲೆಯಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ಗಡ್ಕರಿ ಅವರಿಗೆ ಮನವಿ ಮಾಡಲು ಯಡಿಯೂರಪ್ಪ ಬೆಂಬಲಿಗರು ತೀರ್ಮಾನಿಸಿದ್ದಾರೆ.

ಉಪಚುನಾವಣೆಗೂ ಮುನ್ನವೇ ಇಂತಹ ತೀರ್ಮಾನ ಕೈಗೊಂಡಿದ್ದರೂ ಇದನ್ನು ಬಹಿರಂಗಗೊಳಿಸಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಪಕ್ಷದಲ್ಲಿ ಅಪಸ್ವರ ಕೇಳಿ ಬಂದಿದ್ದು ನಿಷ್ಠಾವಂತ ಹಾಗೂ ಭಿನ್ನ ಮತೀಯರ ಗುಂಪು ತಮ್ಮ ಕಾರ್ಯಾಚರಣೆಗೆ ಇಳಿದಿದೆ. ಪಕ್ಷದ ಅಧ್ಯಕ್ಷರಾಗಿ ಸರಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಪಕ್ಷ ಸಂಘಟನೆಗಿಂತಲೂ ಅಧಿಕಾರದ ದಾಹ ಕಾಡುತ್ತಿದೆ.

ಯಡಿಯೂರಪ್ಪರವರನ್ನು ಅಧಿಕಾರದಿಂದ ಕೆಳಗಿಳಿಸಿ ಮುಖ್ಯ ಮಂತ್ರಿಯಾಗಲು ಹೊರಟಿದ್ದಾರೆ. ಇದಕ್ಕಾಗಿ ಕೆಲವು ಶಾಸಕರು ಮತ್ತು ಸಚಿವರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಇವರನ್ನು ಅಧಿಕಾರದಲ್ಲಿ ಮುಂದುವರಿಸಬಾರದು. ಇವರ ಸ್ಥಾನಕ್ಕೆ ಒಕ್ಕಲಿಗ ಇಲ್ಲವೇ ಪರಿಶಿಷ್ಟ ಜಾತಿಗೆ ಸೇರಿದವರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಲು ತೀರ್ಮಾನಿಸಿದ್ದಾರೆ. ಬಹುತೇಕ ಕೆಲವೇ ದಿನಗಳಲ್ಲಿ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಈಡೇರಲು ಯಡಿಯೂರಪ್ಪ ಬಣ ನಿರ್ಧರಿಸಿದೆ.

Advertisements
Posted in: State News