ಇಶಾ ಶರ್ವಾಣಿ ಜತೆ ಜಹೀರ್ ನಿಖಾಹ್?

Posted on April 12, 2011

0


ಮುಂಬೈ: ಬಹುತೇಕ ಕ್ರಿಕೆಟ್ ಆಟಗಾರರು ತಾವಾಗಿಯೇ ಮದುವೆಯಾಗುತ್ತಿದ್ದರೆ, ಇಲ್ಲೊಬ್ಬ ವಿಶ್ವ ಚಾಂಪಿಯನ್ ತಂಡದ ಬೌಲರ್ ಜಹೀರ್ ಖಾನ್ ಹೆತ್ತವರ ಒತ್ತಾಯಕ್ಕೆ ಮಣಿದು ಮದುವೆಗೆ ಮನಸ್ಸು ಮಾಡಿದ್ದು, ತನ್ನ ಜೀವದ ಗೆಳತಿ ಬಾಲಿವುಡ್ ನಟಿ ಇಶಾ ಶರ್ವಾಣಿಯನ್ನು ಮದುವೆಯಾಗುವುದಾಗಿ ರಹಸ್ಯವಾಗಿ ಹೇಳಿಕೊಂಡಿರುವ ಬಗ್ಗೆ ವೆಬ್‌ಸೈಟ್ ವರದಿ ಮಾಡಿದೆ.

ಈ ಜೋಡಿ ಬಹುಶಃ ಈ ವರ್ಷವೇ ಮದುವೆಯಾಗುವ ಲಕ್ಷಣಗಳಿವೆ. ಆರಂಭದಲ್ಲಿ ಅವರಿಬ್ಬರೂ ಮಾಮೂಲಿ ಸ್ನೇಹಕ್ಕೆ ಸೀಮಿತವಾಗಿದ್ದರು. ಆದರೆ ಇತ್ತೀಚೆಗೆ ಮತ್ತಷ್ಟು ನಿಕಟವಾಗಿದ್ದಾರೆ. ಮದುವೆ ಆಗುವುದು ಪಕ್ಕಾ ಆಗಿದೆ ಎಂದು ಬಾಲಿವುಡ್ ಮೂಲಗಳು ಖಚಿತಪಡಿಸಿವೆ. ಸುದ್ದಿಯನ್ನು ಇಶಾ ನಿರಾಕರಿಸಿಯೂ ಇಲ್ಲ. ಯಸ್ ಅಂತಲೂ ಹೇಳಿಲ್ಲ. ಮುಂಬಯಿ ಇಂಡಿಯನ್ಸ್ ಪರ ಆಡುತ್ತಿದ್ದ ಜಹೀರ್ ಖಾನ್ ಈ ಬಾರಿ ಐಪಿಎಲ್ ೪ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.

೨೦೦೫ರ ಆಸುಪಾಸಿನಲ್ಲಿ ಪಾರ್ಟಿಗಳು, ಸ್ನೇಹಕೂಟಗಳಲ್ಲಿ ಕಣ್ ಕಣ್ ಮಿಲಾಯಿಸತೊಡಗಿದ ಜಹೀರ್-ಇಶಾ ಜೋಡಿ ಆಮೇಲೆ ಕೈ ಕೈ ಮುಲಕಾತ್ ಆಗತೊಡಗಿದವು. ಎರಡು ವರ್ಷ ಹೀಗೇ ಜೋಡಿ ಹಕ್ಕಿಗಳು ವಿಹರಿಸಿದೆಯಾದರೂ ಯಾಕೋ ಇದ್ದಕ್ಕಿದ್ದಂತೆ ದೂರವಾಯಿತು. ಆದರೆ ಅಷ್ಟೇ ವೇಗವಾಗಿ ಕಳೆದ ವರ್ಷ ತಮ್ಮ ಪ್ರೇಮವನ್ನು ನವೀಕರಿಸಿಕೊಂಡಿದ್ದೂ ಆಯಿತು. ಜೋಡಿ ಈಗ ಶಾದಿ ಮಹಲ್‌ವರೆಗೂ ಹೆಜ್ಜೆ ಹಾಕಬೇಕಿದೆ ಅಷ್ಟೆ.

Advertisements
Posted in: National News