ಆರಾಧನೆಯಿಂದ ದೇವರ ಅನುಗ್ರಹ ಲಭ್ಯ

Posted on April 12, 2011

0


ಮಂಗಳೂರು: ನಿಷ್ಕಲ್ಮಷ ಮನಸ್ಸಿನಿಂದ ದೇವರನ್ನು ಆರಾಧನೆ ಮಾಡಿದರೆ ದೇವರ ಅನುಗ್ರಹ ಶೀಘ್ರ ಲಭಿಸುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾ ಯಣ ಆಸ್ರಣ್ಣ ಹೇಳಿದರು.

ಅವರು ಕಾಟಿಪಳ್ಳ ಶ್ರೀ ವಿಷ್ಣು ಭಜನಾ ಮಂಡಳಿಯ ರಜತ ವರ್ಷಾಚರಣೆಯ ಅಂಗವಾಗಿ ಇತ್ತೀಚೆಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಅಧ್ಯಕ್ಷತೆ ಯನ್ನು ಕಾರ್ಪೊರೇಟರ್ ತಿಲಕ್‌ರಾಜ್ ವಹಿಸಿದ್ದರು. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ರಮಾನಂದ ಭಟ್ ಕಾರ್ಯ ಕ್ರಮ ಉದ್ಘಾಟಿಸಿದರು. ಭಜನಾ ಮಂಡಳಿಗಾಗಿ ಸೇವೆಗೈದ ಹೊನ್ನಯ್ಯ ಸನಿಲ್, ಪುರುಷೋತ್ತಮ ಐಗಳ್‌ರನ್ನು ಸನ್ಮಾನಿಸಲಾಯಿತು. ಸತೀಶ್ ಬೈಕಂ ಪಾಡಿ, ಬಶೀರ್ ಬೈಕಂಪಾಡಿ, ಪಟೇಲ್ ಶ್ರೀನಿವಾಸ ರಾವ್, ಕೃಷ್ಣಪ್ಪ ದೇರೇಬೈಲ್, ರಾಜಾರಾಮ್ ಸಾಲ್ಯಾನ್, ಅಕ್ಷಯ ಬಂಗೇರ, ಹೊನ್ನಯ್ಯ ಸನಿಲ್, ವಿಶ್ವ ನಾx, ಪಿ.ನಾರಾಯಣ ಉಪಸ್ಥಿತರಿದ್ದರು.

Advertisements